ಕಾರವಾರ: ತಾಲೂಕಿನ ಮಾಜಾಳಿಯ ಚೆಕ್‌ಪೋಸ್ಟ್ ಮೂಲಕ ಲಾರಿಯಲ್ಲಿ ಸಾಗಿಸುತ್ತಿದ್ದ 99.5 ಸಾವಿರ ರೂ ಮೌಲ್ಯದ ಗೋವಾ ಮದ್ಯವನ್ನು ಅಬಕಾರಿ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಗೋವಾದಿಂದ ಕಾರವಾರಕ್ಕೆ ಲಾರಿಯಲ್ಲಿ ಗೃಹ ಉಪಯೋಗಿ ವಸ್ತುಗಳನ್ನು ಮಾಜಾಳಿಯ ಸಾಗಿಸಲಾಗುತ್ತಿತ್ತು. ಚೆಕ್‌ಪೋಸ್ಟ್‌ನಲ್ಲಿ ತಪಾಸನೆ ನಡೆಸಿದ ವೇಳೆ ಲಾರಿಯಲ್ಲಿ 99.5 ಸಾವಿರ ರೂ ಮೌಲ್ಯದ 78.75 ಲೀ. ಗೋವಾ ಮದ್ಯ ಪತ್ತೆಯಾಗಿದೆ.
ಮದ್ಯದ ಜತೆಗೆಗೆ 2.90 ಲಕ್ಷ ರೂ. ಮೌಲ್ಯದ ಗೃಹ ಉಪಯೋಗಿಸಿ ವಸ್ತುಗಳು ಹಾಗೂ ಲಾರಿಯನ್ನು ಜಫ್ತು ಮಾಡಲಾಗಿದೆ. ಲಾರಿ ಚಾಲಕ ಅಮರ್ ನಾರಾಯಣನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.