ಕುಮಟಾ : ತಾಲೂಕಿನ ಬಾಡ ಗುಡೇ ಅಂಗಡಿಯ ಕಾಂಚಿಕಾ ಪರಮೇಶ್ವರಿ ದೇವಿಯ ಕಾರ್ತಿಕ ಲಕ್ಷ ದೀಪೋತ್ಸವ ಕಾರ್ಯಕ್ರಮದ ಮಹಾ ಸಂಕಲ್ಪಪೂಜೆಯ ನಿಮಿತ್ತ ಇಂದು ಮುಂಜಾನೆ ಕುಮಟಾದ ಸಹಾಯಕ ಕಮಿಷನರ್ ರಾಘವೇಂದ್ರ ಜಗಲ್ಸರ್ ಅವರು ಪಾಲ್ಗೊಂಡಿದ್ದು ವಿಶೇಷ ಎನಿಸಿತು. ತಾಲೂಕಿನ ಮುಖ್ಯ ಅಧಿಕಾರಿಗಳಾಗಿ ಸ್ವಲ್ಪವೂ ಗತ್ತು ಗೈರತ್ತು ಇಲ್ಲದೇ ಮಡಿಯುಟ್ಟು ಶೃದ್ಧಾಭಕ್ತಿಯಿಂದ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಎಲ್ಲರ ಗಮನಸೆಳೆದರು. ಹಾಗೂ ದೇವಸ್ಥಾನದ ಅಭಿವೃದ್ಧಿಯ ಕುರಿತಾಗಿ ಆಗಬೇಕಾದ ವ್ಯವಸ್ಥೆಗಳ ಬಗ್ಗೆಯೂ ಗಮನ ಹರಿಸಿದರು.ಈ ವೇಳೆ ದೀಪೋತ್ಸವ ಸಮಿತಿಯ ಅಧ್ಯಕ್ಷ ಆರ್ ಜಿ ನಾಯ್ಕ,ಕಾರ್ಯದರ್ಶಿ ಎಸ್ ಎಸ್ ಹೆಗಡೆ ಅವರನ್ನು ಒಳಗೊಂಡಂತೆ ಸಮಿತಿಯ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.
ಈ ಸುದ್ದಿಗಳನ್ನು ಓದಲು ಸುದ್ದಿಯ ಮೇಲೆ ಕ್ಲಿಕ್ ಮಾಡಿ.