ಹೊನ್ನಾವರ: ತಾಲೂಕಿನ ಕಡ್ಲೆ ಗ್ರಾಮಪಂಚಾಯತ್ ವ್ಯಾಪ್ತಿಯ ನೀಲ್ಕೋಡಿನ ಗ್ರಾಮಸ್ಥರು ಇಂದು ಶಾಸಕರ ನಿವಾಸಕ್ಕೆ ಆಗಮಿಸಿ, ಅವರ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಅತಿಹೆಚ್ಚು ಅನುದಾನ ನೀಡಿದ್ದಕ್ಕಾಗಿ ಶಾಸಕರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. ಶಾಸಕ ದಿನಕರ ಶೆಟ್ಟಿಯವರು ಅರೆಅಂಗಡಿಯ ಸಮೀಪದಲ್ಲಿರುವ ಚಿಕ್ಕ ಹಳ್ಳಿಯಾಗಿರುವ ನೀಲಕೋಡ್ ಬಂಗಾರಮಕ್ಕಿ ಹಾಗೂ ಕೆಳಗಿನಕೇರಿ ರಸ್ತೆನಿರ್ಮಾಣಕ್ಕೆ 50ಲಕ್ಷ, ಸೇತುವೆ ನಿರ್ಮಾಣಕ್ಕೆ 30ಲಕ್ಷ, ವಿಷ್ಣುಮೂರ್ತಿ ದೇವಸ್ಥಾನಕ್ಕೆ 25ಲಕ್ಷ ರೂಪಾಯಿ ಅನುದಾನ ನೀಡಿದ್ದಾರೆ.
ನಮ್ಮ ಗ್ರಾಮದ ಅಭಿವೃದ್ಧಿ ಯೋಜನೆಗಳಿಗೆ ಹಿಂದೆಂದೂ ದೊರೆಯದ ಅನುದಾನವನ್ನು ಮಾನ್ಯ ದಿನಕರ ಶೆಟ್ಟಿಯವರು ತಮ್ಮ ಆಡಳಿತಾವಧಿಯಲ್ಲಿ ನೀಡಿದ್ದಾರೆ. ನಮ್ಮ ಹಳ್ಳಿಯ ಜನರಬಗ್ಗೆ ವಿಷೇಶ ಕಾಳಜಿಯನ್ನು ಹೊಂದಿರುವ ಶಾಸಕರಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ಗ್ರಾಮಸ್ಥರು ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ.
ಭಾರತೀಯ ಜನತಾ ಪಾರ್ಟಿ ಮುಗ್ವಾ ಮಹಾಶಕ್ತಿಕೇಂದ್ರದ ಅಧ್ಯಕ್ಷ ಶ್ರೀ ರವಿ ಹೆಗಡೆ, ಕಡ್ಲೆ ಗ್ರಾಮಪಂಚಾಯತ್ ಸದಸ್ಯ ಶ್ರೀ ನಾಗರಾಜ ಭಾಗವತ್, ವಿಷ್ಣುಮೂರ್ತಿ ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀ ಮಂಜುನಾಥ ಭಟ್, ಗ್ರಾಮಸ್ಥರಾದ ಶ್ರೀ ಶ್ರೀಧರ ಗೌಡ, ಶ್ರೀ ದೇವು ಗೌಡ, ಶ್ರೀ ಅಕ್ಷಯ ಮಡಿವಾಳ ಮತ್ತಿತರರು ಇದ್ದರು.