ಭಟ್ಕಳ : ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ನಿಂದ ಶಿರಾಲಿ ಸಾಲೆಮನೆಯಲ್ಲಿರುವ ಮಠದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಜಯ ದಶಮಿಯಂದು ದಸರಾ ಕಾವ್ಯೋತ್ಸವ ಕವಿಗೋಷ್ಠಿ ನಡೆಯಿತು. ಕವಿಗೋಷ್ಠಿಯನ್ನು ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್.ನರಸಿಂಹ ಮೂರ್ತಿ ಉದ್ಘಾಟಿಸಿ ಭಟ್ಕಳ‌ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವಿಭಿನ್ನವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದರ ಕುರಿತು ಮೆಚ್ವುಗೆ ವ್ಯಕ್ತಪಡಿಸಿದರಲ್ಲದೇ ಸಾಹಿತ್ಯವನ್ನು ಜನರಿರುವಲ್ಲಿಯೇ ಕೊಂಡೊಯ್ಯುತ್ತಿರುವ ಪರಿಷತ್ನ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಮಂಜುಸುತ,ಸುರೇಶ್ ಮುರ್ಡೇಶ್ವರ ,ಜಯಶ್ರೀ ಆಚಾರಿ, ಪರಮೇಶ್ವರ ನಾಯ್ಕ ತಮ್ಮ ಸ್ವರಚಿತ ಕವನ ವಾಚಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರಲ್ಲದೇ ಅಧ್ಯಕ್ಷೀಯ ನುಡಿಗಳನ್ನಾಡುತ್ತ ಹಬ್ಬಗಳು ನಮ್ಮ ಸಂಸ್ಕ್ರತಿಯ ಪ್ರತೀಕ. ಹಬ್ಬಗಳಿಗೆ ಮನಸುಗಳನ್ನು ಒಂದುಗೂಡಿಸುವ ಶಕ್ತಿಯಿದೆ. ಆ ನೆಪದಲ್ಲಿ ಜೊತೆಯಾಗುವ ನಾವೆಲ್ಲ ಸಾಹಿತ್ಯ ಸಂಗೀತವನ್ನು ಆಸ್ವಾಧಿಸಬೇಕು‌. ಅದಕ್ಕೆ ಪೂರಕವಾಗಿ ಜರುಗಿರುವ ದಸರಾ ಕಾವ್ಯೋತ್ಸವದಲ್ಲಿ ಕಾವ್ಯ ವಾಚಿಸಿದ ಎಲ್ಲ ಕವಿಗಳನ್ನು ಅಭಿವಂದಿಸಿದರಲ್ಲದೇ ಕಾರ್ಯಕ್ರಮ ಸಂಘಟಿಸಲು ಸಹಕರಿಸಿದ ದೇವಾಲಯದ ಆಡಳಿತ ಮಂಡಳಿಯ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಶಿಕ್ಷಕ ಪರಮೇಶ್ವರ ನಾಯ್ಕ ಕವಿಗೋಷ್ಠಿಯನ್ನು ನಿರ್ವಹಿಸಿ ಎಲ್ಲರನ್ನು ವಂದಿಸಿದರು.

RELATED ARTICLES  ಭಕ್ತಜನ ರಕ್ಷಕಿ ಎಂದೇ ಬಿರುದಾಂಕಿತ ಶ್ರೀ ಮಹಾಸತಿ ದೇವಿಗೆ ವಿಶೇಷ ದಂಡಾವಳಿ ಸಹಿತ ಪುಷ್ಪಾಲಂಕಾರ ಪೂಜೆ

ದಸರಾ ಕಾವ್ಯೋತ್ಸವ ದಲ್ಲಿ ವಲಯ ಅರಣ್ಯಾಧಿಕಾರಿ ಶಂಕರ ಗೌಡ ಅನಗೊಂಡ,ಶಿರಾಲಿ ಗ್ರಾಮ ಪಂಚಾಯತ ಅಧ್ಯಕ್ಷ ವೆಂಕಟೇಶ ನಾಯ್ಕ, ಸದಸ್ಯ ಮೋಹನ ದೇವಾಡಿಗ, ತಾಲೂಕಾ ಪಂಚಾಯತ್.ಸದಸ್ಯೆ ಮಾಲತಿ ದೇವಾಡಿಗ, ಉದ್ಯಮಿ ಅಶೋಕ ಕಾಮತ್‌,ದೇವಾಲಯದ ಆಡಳಿತ ಮಂಡಳಿಯ ರಾಜೇಶ್ ಮೊಗೇರ್, ಮಂಜುನಾಥ ನಾಯ್ಕ, ಶಿಕ್ಕಷ ದೇವಿದಾಸ ನಾಯ್ಕ,ಜಯಶಂಕರ್ ಮೊಗೇರ್,ಸುಕ್ರಪ್ಪ ಮೊಗೇರ್ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕದ ಸಾಧನೆ