ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ದೇವಳಗಳ ಕಳ್ಳತನ ಪ್ರಕರಣಗಳು ಮತ್ತೆ ಮುಂದುವರಿಯುತ್ತಿದ್ದು, ದೇವಾಲಯಗಳಿಗೆ ಕದೀಮರು ಕನ್ನ ಹಾಕುವ ಪ್ರಕ್ರಿಯೆ ಮುಂದುವರಿಸಿದ್ದಾರೆ. ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಗ್ರಾಮದ ಮಹಾಗಜಲಕ್ಷ್ಮೀ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ ಎಂದು ವರದಿಯಾಗಿದೆ.
ದೇವಸ್ಥಾನದ ಬಾಗಿಲಿನ ಬೀಗವನ್ನು ಮುರಿದ ಕಳ್ಳರು, ದೇವಸ್ಥಾನದ ಒಳಗಿದ್ದ ಕಾಣಿಕೆ ಹುಂಡಿಯನ್ನು ಒಡೆದು, ಹುಂಡಿಯಲ್ಲಿದ್ದ ಅಂದಾಜು ಮೂರು ಸಾವಿರ ರೂ ಹಣ ಹಾಗೂ ದೇವಾಲಯದಲ್ಲಿ ಇದ್ದ 10 ಸಾವಿರ ರೂ ಮೌಲ್ಯದ ಎರಡು ದೊಡ್ಡದಾಗ ಹಿತ್ತಾಳೆಯ ಗಂಟೆಗಳು ಮತ್ತು 20 ಸಾವಿರ ರೂಪಾಯಿ ಮೌಲ್ಯದ ತಾಮ್ರದ ಕಡಾಯಿ, 10 ಸಾವಿರ ರೂಪಾಯಿ ಮೌಲ್ಯದ ಡಿ.ವಿ.ಆರ್.ಅನ್ನು ಕದ್ದೊಯ್ದಿದ್ದಾರೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.