ಅಂಕೋಲಾ: ಅಂಕೋಲಾ ತಾಲೂಕಿನ ವೈದ್ಯ ಹೆಗ್ಗಾರ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ದೇವಸ್ಥಾನದಲ್ಲಿನ 15 ಕೆಜಿ ತೂಕದ ಪ್ರಭಾವಳಿ ಗಂಟೆ ಹಾಗೂ ಹುಂಡಿಯನ್ನ ಕಳವು ಮಾಡಲಾಗಿದ್ದು, ದೇವರ ಗರ್ಭಗುಡಿಯಲ್ಲಿರುವ ಮೂರ್ತಿಯ ಬೆಳ್ಳಿ ಕವಚವನ್ನೂ ಕದ್ದೊಯ್ಯಲಾಗಿದೆ.
ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ನೀಡಿ
ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು
ಕದ್ದವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ನೀಲಿ ಕಾರಿನಲ್ಲಿ ಬಂದಿದ್ದರೆನ್ನಲಾದ ಕಳ್ಳರಾರೋ , ಹೆಗ್ಗಾರದ ಶ್ರೀ ಮಹಾಗಣಪತಿ ದೇವಸ್ಥಾನದ ಒಳಗೆ ಹೊಕ್ಕಿ , ಶ್ರೀದೇವರ ಪ್ರಭಾವಳಿ, ಮುಖಗವಚ, ಅಂದಾಜು 15 ಕೆ.ಜಿ ಯ ದೊಡ್ಡ ಗಂಟೆ ಮತ್ತಿತರ ಬೆಲೆಬಾಳುವ ವಸ್ತುಗಳನ್ನು , ಮತ್ತು ಕಾಣಿಕೆ ಡಬ್ಬಿ ಒಡೆದು ಅದರಲ್ಲಿದ್ದ ಸಾವಿರಾರು ರೂಪಾಯಿ ಹುಂಡಿ ಹಣವನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದ್ದು ಶುಕ್ರವಾರ ಮಧ್ಯಾಹ್ನದ ಅವಧಿಯಲ್ಲಿ ಈ ಕಳ್ಳತನ ನಡೆದಿರುವ ಸಾಧ್ಯತೆ ಕೇಳಿ ಬಂದಿದೆ.
ಶೇವಕಾರ ಗ್ರಾಮದ ಈಶ್ವರ ದೇವಸ್ಥಾನದಲ್ಲಿಯೂ ಕಳ್ಳರು ತಮ್ಮ ಕರಾಮತ್ತು ತೋರಿಸಿದ್ದಾರೆ ಎನ್ನಲಾಗಿದ್ದು, ಪೋಲೀಸ್ ತನಿಖೆಯಿಂದ ನಿಖರ ಮಾಹಿತಿ ಮತ್ತು ಕಳುವಾದ ವಸ್ತು ಮತ್ತು ಇತರೆ ಆಭರಣಗಳು ಹಾಗೂ ಕಾಣಿಕೆ ಹುಂಡಿ ನಗದಿನ ಅಂದಾಜು ತಿಳಿದು ಬರಬೇಕಿದೆ. ಕಳ್ಳರಾರೋ ನೀಲಿ ಕಾರಿನಲ್ಲಿ ಬಂದು ಹೋದರು ಎನ್ನಲಾಗಿರುವ ದೃಶ್ಯ ಸ್ಥಳೀಯ ಕೆಲ ಸಿ.ಸಿ ಟಿವಿಯಲ್ಲಿ ದಾಖಲಾಗಿದೆ ಎನ್ನಲಾಗಿದ್ದು, ಕಳ್ಳತನಕ್ಕೆ ಸಂಭಂದಿಸಿದಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಈ ಸುದ್ದಿಗಳನ್ನೂ ಓದಿ.