ಕುಮಟಾ: “ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾ”, ಉತ್ತರಕನ್ನಡ ಶಾಖೆ ಕುಮಟಾ, ವತಿಯಿಂದ ನಿರ್ಮಲಾ ಕಾನ್ವೆಂಟ್ ನಲ್ಲಿ ಹದಿಹರೆಯ ವಯೋಮಾನದ ಮಕ್ಕಳಲ್ಲಿ ಉಂಟಾಗುವ ತಲ್ಲಣಗಳ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.

ಹದಿಹರೆಯ ಅವಧಿಯಲ್ಲಿ ಮಕ್ಕಳಲ್ಲಿ ದೈಹಿಕ, ಭಾವನಾತ್ಮಕ, ಸಾಮಾಜಿಕ, ಮಾನಸಿಕ ಬದಲಾವಣೆ ಉಂಟಾಗುವುದರ ಜೊತೆಗೆ ಕೋಪ, ನಿರಾಶೆ, ಆಧುನಿಕತೆಗಳ ತುಮುಲ, ಕಲಿಕೆಯಲ್ಲಿ ಉಂಟಾಗುವ ತೊಂದರೆಗಳು, ಬೇಸರ, ಪ್ರೀತಿಯ ಕೊರತೆ, ದುಖಃ, ಮೇಲರಿಮೆ, ಕೀಳರಿಮೆ, ಕಂಪ್ಯೂಟರ್ ಗೀಳು, ನೈತಿಕ ದ್ವಂದ್ವಗಳು, ನಕಾರಾತ್ಮಕ ಧೋರಣೆ, ಅನಗತ್ಯ ತೊಡಕುಗಳಲ್ಲಿ ಸಿಲುಕಿಕೊಳ್ಳುವುದು ಹದಿಹರೆಯದ ಲಕ್ಷಣ ಎಂದು ಕಾರ್ಯಕ್ರಮದ ಉಪನ್ಯಾಸಕರದ ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾ ಕುಮಟಾ ಬ್ರಾಂಚ್‌ನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ರೇಖಾ ಯಲಿಗಾರ ರವರು ಉಪನ್ಯಾಸ ನೀಡಿದರು.

RELATED ARTICLES  ಉದ್ಯೋಗ ಕೊಡಿಸೋದಾಗಿ ನಂಬಿಸಿ 3 ಲಕ್ಷ ವಂಚನೆ : ಹೊನ್ನಾವರದಲ್ಲಿ ದಾಖಲಾಗಿದೆ ಪ್ರಕರಣ.

ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾದ ಬೆಳವಣಿಗೆಯ ಹಂತ & ಲಭಿಸುವ ಸೇವೆಗಳ ಕುರಿತು “ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾ ಕುಮಟಾ ಬ್ರಾಂಚ್‌ನ ಕಾರ್ಯಕ್ರಮಾಧಿಕಾರಿ ಶ್ರೀಮತಿ ಮಂಜುಳಾ ಗೌಡ ಪ್ರಾಸ್ತಾವಿಕ ಮಾತನಾಡಿದರು.

RELATED ARTICLES  ಜಿಲ್ಲಾಮಟ್ಟದ ಶಿವತಾಂಡವ ನೃತ್ಯ ಸ್ಪರ್ಧೆ: ಸಾನ್ವಿ ರಾವ್ ತೃತೀಯ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯಾಧ್ಯಾಪಕರಾದ ಶ್ರೀಮತಿ ಐರಿನ್ ರವರು ಅಧ್ಯಕ್ಷೀಯ ಮಾತನಾಡಿದರು.ಶಿಕ್ಷಕವೃಂದದವರು ಉಪಸ್ಥಿತರಿದ್ದರು.