ಕಾರವಾರ: ಅಕ್ಟೋಬರ್ 22 ರಂದು ಎ.ಎನ್ ದೇವರಾಜ್ ವಯಸ್ಸು 45 ವರ್ಷ ಈತನು ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ. ಕಳೆದ 04 ವರ್ಷಗಳಿಂದ ಕಾರವಾರ ಐ.ಟಿ.ಐ ಕಾಲೇಜಿನಲ್ಲಿ ಜೆ.ಟಿ.ಓ ಕೆಲಸ ಮಾಡಿಕೊಂಡಿದ್ದರು ಸೆಪ್ಟೆಂಬರ್ 25 ರಂದು 11-00 ಗಂಟೆಗೆ ಕಾಲೇಜಿನ ಹಾಜರಾತಿ ಪುಸ್ತಕದಲ್ಲಿ ಸಹಿಮಾಡಿ ತದನಂತರ ಕಾಲೇಜಿನಿಂದ ಹೊರ ಹೋದವನು ಪುನ: ಮನೆಗೂ ಬಾರದೇ, ಕಾಲೇಜಿಗೂ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆ.

RELATED ARTICLES  ಭಿಕ್ಷೆ ಬೇಡುವ ತೃತೀಯ ಲಿಂಗಿಗಳಿಂದ ಜನರು ನಾಣ್ಯಗಳನ್ನು ಭಿಕ್ಷೆಯಾಗಿ ಪಡೆಯುತ್ತಾರೆ ಗೊತ್ತಾ?

ಕಾಣಿಯಾದನನ್ನು ಈ ವರೆಗೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಈ ಬಗ್ಗೆ ಕಾಣಿಯಾದ ತನ್ನ ಅಕ್ಕನ ಮಗನನ್ನು ಹುಡುಕಿಕೊಡುವಂತೆ ಕಾರವಾರ ಶಹರ ಪೊಲೀಸ್ ಠಾಣೆಗೆ ಎಚ್.ಆರ್ ನಂಜೇಗೌಡಾ ತಂದೆ ರಾಮೇಗೌಡಾ ವಯಸ್ಸು 62 ವರ್ಷ, ವೃತ್ತಿ ರೈತಾಬಿ ಸಾಗುಝಲಗೂಡು ಕೆ.ಆರ್.ಪೋಸ್ಟ್ ಜಿಲ್ಲೆ: ಚಿಕ್ಕಮಗಳೂರು ಇವರು ದೂರು ನೀಡಿದ್ದು, ಕಾಣೆಯಾದ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ದೂರವಾಣಿ ಸಂಖ್ಯೆ 08382 226333 ಗೆ ಸಂಪರ್ಕಸಿ ಎಂದು ಶಹರ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಇಂಜಿನಿಯರ್​ ದಿನದಂದು ಸರ್​.ಎಂ.ವಿ.ಗೆ ಗೌರವ ಸಲ್ಲಿಸಿದ ಗೂಗಲ್​ ಡೂಡಲ್​

ಈ ಸುದ್ದಿಗಳನ್ನೂ ಓದಿ.