ಶಿರಸಿ: ನಗರದ ಗಾಯತ್ರಿ ವೈನ್ ಶಾಪ್’ನಲ್ಲಿ ನಡೆದ ಹೊಡೆದಾಟದಲ್ಲಿ ಕಸ್ತೂರಬಾ ನಗರದ ಮೊಹಮದ್ ಯಾಸಿನ್ ನಜೀರ್ ಅಹಮದ್ ಎಂಬುವರಿಗೆ ಕಸದ ಗುಡ್ಡೆಯ ಮಂಜುನಾಥ ಗೋಪಾಲ ಪಾಠಣಕರ್,ಎಸಳೆ ನಂಡಕನಳ್ಳಿಯ ದರ್ಶನ ಮಹಾದೇವ,ಇಂದಿರಾ ನಗರದ ಮುಸ್ತಾಕ ಅಹಮದ್ ಅಬ್ದುಲ್ ರೆಹಮಾನ್ ಶೇಖ್ ಹಾಗು ರಾಮನಬೈಲಿನ ಪೈಜಾನ್ ಅಬ್ದುಲ್ ಸಮದ್ ಸೇರಿ ಕೊಲೆ ಮಾಡುವ ಉದ್ದೇಶದಿಂದ ಅವಾಚ್ಯ ಶಬ್ದ ಪ್ರಯೋಗಿಸಿ ಕಾಂಕ್ರೀಟ್ ಸಿಮೆಂಟ್ ತುಂಡಿನಿಂದ ಹೊಡೆದು ಜೀವ ಬೆದರಿಕೆ ಹಾಕಿದ ಬಗ್ಗೆ ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಮೇಲಿನ ಮೂರು ಆರೋಪಿಗಳನ್ನು ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಂಜುನಾಥ ಗೋಪಾಲ ಪಾಠಣಕರ್ ಯಾನೆ ಪಾಟು ತಲೆ ಮರೆಸಿಕೊಂಡಿದ್ದು ಪೋಲಿಸರು ಬಲೆ ಬಿಸಿದ್ದಾರೆ.
ಈ ಸುದ್ದಿಗಳನ್ನೂ ಓದಿ.