ಭಟ್ಕಳ : ಅಂಗಡಿ ಕಬ್ಜಾ ಪ್ರಕರ್ಣದಲ್ಲಿ ಪೋಲೀಸರು ನಾಮಧಾರಿಗಳನ್ನೇ ಗುರಿಯಾಗಿಸಿ, ದುರುದ್ದೇಶ ಪೂರ್ವಕವಾಗಿ ಹಾಕಿರುವ ದರೋಡೆ ಪ್ರಕರಣ (ಕಲಂ೩೯೫)ವನ್ನು ಹಿಂತೆಗೆಯುವಂತೆ ಆಗ್ರಹಿಸಿ ಭಟ್ಕಳದ ನಾಮಧಾರಿ ಸಮಾಜವು ಅಖಂಡ ಹಿಂದೂ ಸಮಾಜದ ಬೆಂಬಲದೊಂದಿಗೆ ದಿನಾಂಕ 04-10-2017 ರ ಬುಧವಾರ ಬೆಳಿಗ್ಗೆ 10-00 ಗಂಟೆಗೆ ಬೃಹತ್ ಮೌನ_ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಿದ್ದು ನಂತರ ತಹಶಿಲ್ದಾರ ಕಛೇರಿಯ ಎದುರು ಮಧ್ಯಾಹ್ನ2-00 ಗಂಟೆಯ ವರೆಗೆ ಧರಣಿ ಕೂರಲಾಗುವದು.

ಭಟ್ಕಳದ ಗುರುಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಗುರುಮಠದ ಅಧ್ಯಕ್ಷರಾದ ಶ್ರೀ ಎಮ್ ಆರ್ ನಾಯ್ಕರವರು ಈ ವಿಷಯ ತಿಳಿಸಿದರು. ಮಾತನಾಡಿದ ಅವರು ಭಟ್ಕಳದಲ್ಲಿ ದಿನಾಂಕ 14-09-2017ರಿಂದ ಜರುಗಿದ ಅನಪೇಕ್ಷಿತ ಘಟನೆಗೆ ಸಂಬಂದಿಸಿದಂತೆ, ಘಟನೆ ನಡೆದ ನಾಲ್ಕು ದಿನಗಳ ನಂತರ ಪೋಲೀಸರು ಕೇವಲ ನಾಮಧಾರಿ ಮುಖಂಡರುಗಳನ್ನು ಗುರಿಯಾಗಿಟ್ಟುಕೊಂಡು ದುರುದ್ದೇಶಪೂರ್ವಕವಾಗಿ ದರೋಡೆ ಪ್ರಕರಣ(ಕಲಂ395)ವನ್ನು ದಾಖಲಿಸಿದ್ದಾರೆ, ಇದರೊಂದಿಗೆ ಇನ್ನೆರಡು ಪ್ರಮುಖ ಬೇಡಿಕೆಗಳನ್ನು ಅವರು ಪ್ರಸ್ತಾಪಿಸಿದರು.

RELATED ARTICLES  ಇಹಲೋಕ ತ್ಯಜಿಸಿದ ಡಾ. ಎಂ.ಪಿ ಕರ್ಕಿ

೧) ಘಟನೆಯ ಸಂಬಂಧ ಯುವಕರ ಮೇಲೆ ದಾಖಲಿಸಿರುವ ದರೋಡೆ ಪ್ರಕರಣ(ಕಲಂ395)ವನ್ನು ಕೂಡಲೇ ಹಿಂತೆಗೆಯಬೇಕು

೨) ಆತ್ಮಹತ್ಯೆ ಮಾಡಿಕೊಂಡಿರುವ ದಿ.ರಾಮಚಂದ್ರ ನಾಗಪ್ಪ ನಾಯ್ಕ ಕುಟುಂಬಕ್ಕೆ 10ಲಕ್ಷ ರೂ. ಗಳ ಪರಿಹಾರ ನೀಡಬೇಕು

RELATED ARTICLES  ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯ ಬೃಹತ್ ಗಾತ್ರದ ಗೋದಾಮು ಉದ್ಘಾಟನೆ.

೩) ಆತ್ಮಹತ್ಯೆ ಮಾಡಿಕೊಳ್ಳಲು ಮೂಲ ಕಾರಣೀಕರ್ತರಾದ ಭಟ್ಕಳ ಪುರಸಭೆಯ ಅಧಿಕಾರಿಗಳು ಮತ್ತು ನಗರ ಯೋಜನಾ ಪ್ರಾಧಿಕಾರದ ಅಧಿಕಾರಿ ಆರ್.ಪಿ.ನಾಯಕ ಇವರನ್ನು ಕೂಡಲೇ ಬಂಧಿಸಿ, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು

ಮತ್ತೆ ಮಾತನಾಡಿದ ಅಧ್ಯಕ್ಷರು ಇದೊಂದು ಶಾಂತಿಯುತ ಮೌನ ಪ್ರತಿಭಟನೆಯಾಗಿದ್ದು ಎಲ್ಲರ ಸಹಕಾರ ಕೋರಲಾಗುವದು. ಈ ಪ್ರತಿಭಟನೆಯಲ್ಲಿ ಕನಿಷ್ಠ ಹತ್ತು ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಗುರುಮಠದ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.