ಕಾರವಾರ: ಇಲ್ಲಿನ ಸುಂಕೇರಿ, ಕಠಿಣಕೋಣದ ಮಾಂಜೇಕರ ರಸ್ತೆಯ ನಿವಾಸಿ ಅಬ್ದುಲ್‌ಗಫೂರ ಇಸ್ಮಾಯಿಲ್ ಶೇಖ್ (57) ಎನ್ನುವವರು ಕಾಣೆ ಯಾಗಿದ್ದು ಅವರನ್ನು ಹುಡುಕಿಕೊಡುವಂತೆ ಅವರ ಪತ್ನಿ ಫಾತೀಮಾ ಅಬ್ದುಲ್ ಗಫೂರ ಎನ್ನುವವರು ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಕಳೆದ ನವೆಂಬರ್ 17ರಂದು ರಾತ್ರಿ ಸುಮಾರು 8-30 ಗಂಟೆಗೆ ಅಂಗಡಿ ಬಂದ್ ಮಾಡಿ, ನಮಗೆ ಕಾಣದಂತೆ ತನ್ನ ಮೋಟಾರ ಸೈಕಲ್‌ನ್ನು ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಓಣಿಯಲ್ಲಿ ತಂದು ನಿಲ್ಲಿಸಿಟ್ಟು, ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

RELATED ARTICLES  ಜೈನ ಸಮುದಾಯದ ದಾರ್ಶನಿಕ ಮುನಿ, ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜ ಇನ್ನಿಲ್ಲ.