ಕುಮಟಾ : ಆಕಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧನೋರ್ವ. ಬಾವಿಯ ತಳಭಾಗದಲ್ಲಿರುವ ಕೆಸರಿನಲ್ಲಿ ಕಾಲು ಹುಗಿದು ಹೋಗಿದ್ದರಿಂದ ಅಲ್ಲಿಯೇ ಮೃತಪಟ್ಟ ಘಟನೆ ಹಳೇ ಹೆರವಟ್ಟಾದ ಶ್ರೀ ಸಾಣಿಯಮ್ಮ ದೇವಸ್ಥಾನ ಸಮೀಪ ನಡೆದಿದೆ. ವೃದ್ಧನೋರ್ವ ಆಕಸ್ಮಿಕವಾಗಿ ಬಾವಿಯಲ್ಲಿ ಜಾರಿಬಿದ್ದು ಮೃತಪಟ್ಟಿದ್ದು. ಹಳೇ ಹೆರವಟ್ಟಾದ ಶ್ರೀ ಸಾಣಿಯಮ್ಮ ದೇವಸ್ಥಾನ ಸಮೀಪದ ನಿವಾಸಿ ನಾಗಪ್ಪ ನಾಗು ಗೌಡ (65) ಮೃತಪಟ್ಟ ವೃದ್ಧ. ಇವರು ಮನೆಯ ಬಳಿಯ ಬಾವಿಯಲ್ಲಿ ನೀರು ತೆಗೆಯುವಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾರೆ. ಬಾವಿಯ ತಳಭಾಗದಲ್ಲಿರುವ ಕೆಸರಿನಲ್ಲಿ ಕಾಲು ಹುಗಿದು ಹೋಗಿದ್ದರಿಂದ ಅಲ್ಲಿಯೇ ಮೃತಪಟ್ಟಿದ್ದಾನೆ.

RELATED ARTICLES  ಪದವಿ, ಇಂಜಿನಿಯರಿಂಗ್ ಕಾಲೇಜು ಆರಂಭಕ್ಕೆ ಗ್ನೀನ್ ಸಿಗ್ನಲ್ !

ಬಳಿಕ ಮಾಹಿತಿ ಪಡೆದ ಅಗ್ನಿ ಶಾಮಕ ದಳವು ಸ್ಥಳಕ್ಕೆ ಧಾವಿಸಿ, ಶವವನ್ನು ಬಾವಿಯಿಂದ ಮೇಲೆತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರ
ಮಾಡಲಾಗಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

RELATED ARTICLES  ಕಾರವಾರ ನಗರಸಭೆಗೆ 5 ಕೋಟಿ ಮಂಜೂರು