ಹೊನ್ನಾವರ : ಕರ್ನಾಟಕ ಸರ್ಕಾರ, ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಕೃಷಿ ಇಲಾಖೆ, ಅಮೃತ ಯೋಜನೆ ರೈತ ಉತ್ಪಾದಕ ಮತ್ತು ಸ್ಕೊಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಹಳದಿಪುರ ಆಗ್ರೋ ರೈತ ಉತ್ಪಾದಕ ಕಂಪನಿ ವತಿಯಿಂದ ಮಣ್ಣು ಪರೀಕ್ಷೆ ಕಾರ್ಯಕ್ರಮವನ್ನು ಸಂಕೊಳ್ಳಿ ಗ್ರಾಮದ ಕಂಪನಿ ಷೇರುದಾರರ ತೋಟದಲ್ಲಿ ಇರಿಸಲಾಗಿತ್ತು. ಮಣ್ಣು ಪರೀಕ್ಷೆಯ ಮೊದಲ ಹಂತದ ಭೂಮಿಯಿಂದ ಮಣ್ಣು ತೆಗೆಯುವ ವಿಧಾನದ ಪ್ರಾತ್ಯಕ್ಷಿಕೆನ್ನು ಎಲ್ಲಾ ರೈತರ ಸಮ್ಮುಖದಲ್ಲಿ ಮಾಡಲಾಯಿತು. ರೈತರು ಬೆಳೆಗಳನ್ನು ಬೆಳೆಯುವಾಗ ಮಣ್ಣಿನ ಪರೀಕ್ಷೆ ಅಗತ್ಯವಾಗಿದ್ದು, ಮಣ್ಣಿನಲ್ಲಿರುವ ಅಂಶಗಳನ್ನಾಧರಿಸಿ ಅದಕ್ಕೆ ಪೂರಕವಾದ ಬೆಳೆ ತೆಗೆಯುವುದು ಸೂಕ್ತ ಹಾಗೂ ಮಣ್ಣನ್ನು ತೆಗೆಯಲು ಇರುವ ಮಾರ್ಗಗಳು, ಮಣ್ಣು ಪರೀಕ್ಷೆಯಿಂದಾಗುವ ಉಪಯೋಗಗಳು, ಮತ್ತು ಮಹತ್ವವನ್ನು ಸ್ಕೊಡ್‌ವೆಸ್ ಸಂಸ್ಥೆಯ ಯೋಜನಾಧಿಕಾರಿಗಳಾದ ಶ್ರೀ ಪ್ರಶಾಂತ ನಾಯಕ ಅವರು ತಿಳಿಸಿದರು.
ನಂತರದಲ್ಲಿ ಶ್ರೀ ಪ್ರಶಾಂತ ನಾಯಕ ಇವರು ಮಣ್ಣಿನ ಪರೀಕ್ಷೆಯ ನಂತರ ಮಣ್ಣಿನಲ್ಲರುವ ಫಲವತ್ತತೆ ಕಾಪಾಡಿಕೊಳ್ಳುವು ಅತೀ ಅವಶ್ಯಕ ಎಂದು ತಿಳಿಸಿದರು. ಅರೇಕಾ ಕಿಂಗ್ ಮತ್ತು ಗೋಕ್ರಪಾಮೃತ ಗೊಬ್ಬರಗಳ ಬಳಕೆಯನ್ನು ವಿವಿಧ ಹಂತಗಳಲ್ಲಿ ಬಳಸುವ ಮಾಹಿತಿ ನೀಡಿ ಗೊಬ್ಬರವನ್ನು ಉಚಿತವಾಗಿ ಅಲ್ಲಿ ನೆರೆದ ರೈತರಿಗೆ ನೀಡಿದರು. ಸ್ಕೊಡ್‌ವೆಸ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ನೀಲಕಂಠ ಶೇಷಗಿರಿ ಹಾಗೂ ತಾಂತ್ರಿಕ ಅಧಿಕಾರಿಗಳಾದ ಶ್ರೀ ಪರೇಶ ಹೆಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರಿಗೆ ಸೂಕ್ತ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕರು, ನಿರ್ದೇಶಕರು,ಕಂಪನಿಯ ಎಲ್ಲಾ ರೈತ ಸದಸ್ಯರು ಹಾಗೂ ಊರಿನ ಜನರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.