ಶಿರಸಿ: ನಗರದ ಅಯ್ಯಪ್ಪ ದೇವಾಲಯದಲ್ಲಿ ಕಾರ್ತೀಕ ಸೋಮವಾರದಂದು ಪ್ರಜ್ವಲ ಟ್ರಸ್ಟ್ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.

ಶ್ರೀಮತಿ ಚೇತನಾ ಹೆಗಡೆ ಇವರ ಶಿಷ್ಯವೃಂದದವರು ಅತ್ಯಂತ ಭಕ್ತಿ ಪೂರ್ವಕ ಭಜನೆಗಳನ್ನು ಹಾಗೂ ಶಂಕರ ಸ್ತೋತ್ರಗಳನ್ನು ಹಾಡಿ ಸೇವೆ ಸಲ್ಲಿಸಿದರು. ನಂತರದಲ್ಲಿ ಸ್ನೇಹಾ ಉದಾಸಿ, ಶ್ರೀನಿಧಿ ಹೆಗಡೆ,ಬಿಂದು ಹೆಗಡೆ, ಸುಗಂಧಿ ಗುರುಪ್ರಸಾದ್ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಇಳಿಹೊತ್ತು 6 ಗಂಟೆಯಿಂದ ಪ್ರಾರಂಭವಾದ ಭಜನಾ ಕಾರ್ಯಕ್ರಮವು ಮಹಾ ಮಂಗಳಾರತಿಯವರೆಗೆ ಸರಿಸುಮಾರು 3 ಗಂಟೆಗಳವರೆಗೆ ನಿರಂತರವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ತಬಲಾ ಸಾಥಿಯಾಗಿ ಸುಬ್ಬಣ್ಣ ಮಂಗ್ಳೂರ್, ಹಾರ್ಮೋನಿಯಂನಲ್ಲಿ ಕಮಲಾಕ್ಷಿ ಹೆಗಡೆ ಸಾಥ್ ನೀಡಿದರು. ಮಹಾ ಮಂಗಳಾರತಿಯ ನಂತರ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

RELATED ARTICLES  ಚಿದಾನಂದ ಭಂಡಾರಿಯವರ ಕೊಂಕಣಿ ಗೀತೆ ನಿವೇದನಾ ಯೂಟ್ಯೂಬ್ ನಲ್ಲಿ ಬಿಡುಗಡೆ.