ಶಿರಸಿ : ಶೆಡ್ ನಲ್ಲಿ ನಿಲ್ಲಿಸಿಟ್ಟಿದ್ದ ಅಂಬುಲೆನ್ಸ್ ನಿಂದ ವೆಂಟಿಲೇಟರ್ ಹಾಗೂ ಇನ್ನಿತರ ವಸ್ತುಗಳನ್ನು ಕದ್ದ ಕಳ್ಳನೋರ್ವ ಶಿರಸಿ ನಗರ ಠಾಣೆ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಸಿರಾಜ್ ಅಹಮದ್ ಅಲಿಯಾಸ್ ರಫೀಕ್ ಗಣೇಶನಗರ ಶಿರಸಿ ಎಂಬಾತನೇ ಬಂದಿತ ಆರೋಪಿಯಾಗಿದ್ದಾನೆ. ಈತ ನವಂಬರ್ ನಾಲ್ಕರಂದು ಶಿರಸಿ ಪಿಡಬ್ಲ್ಯೂಡಿ ಪ್ರವಾಸಿ ಮಂದಿರದಲ್ಲಿ ನಿಲ್ಲಿಸಿಟ್ಟಿದ್ದ ಆಂಬುಲೆನ್ಸ್ ನಿಂದ ವೆಂಟಿಲೇಟರ್ ಮಷೀನ್, ಸೆಕ್ಷನ್ ಮಷೀನ್, ಸ್ಟೇಪ್ನಿ ಟೈಯರ್ ಇವುಗಳನ್ನು ಕಳ್ಳತನ ಮಾಡಿಕೊಂಡು ನಾಪತ್ತೆಯಾಗಿದ್ದ.
ಈ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಲು ವಿಶೇಷ ಕಾರ್ಯಚರಣೆ ನಡೆಸಿದ ಶಿರಸಿ ನಗರ ಠಾಣೆ ಪೋಲಿಸರು ಆರೋಪಿಯನ್ನು ಬಂಧಿಸಿ, ಬಂಧಿತ ಆರೋಪಿಯಿಂದ 1.5 ಲಕ್ಷ ಮೌಲ್ಯದ ವೆಂಟಿಲೇಟರ್ ಮಶಿನ್, ಹಾಗೂ 3 ಸಾವಿರ ಮೌಲ್ಯದ ಸ್ಟೆಪ್ನಿ ಟಯರ್ ಜಪ್ತಿಪಡಿಸಿಕೊಂಡಿದ್ದಾರೆ.
ಆರೋಪಿತನಿಂದ ಕಳುವಾದ ಎಲ್ಲಾ ವಸ್ತುಗಳನ್ನು ವಶಪಡುಸಿಕೊಂಡಿದ್ದಾರೆ. ವಶಪಡಿಸಿ ಕೊಂಡ ವಸ್ತುಗಳ ಮೌಲ್ಯ ರು.1.10 ಆಗಿದ್ದು, ಎಲ್ಲ ವಸ್ತುಗಳನ್ನು ಪೊಲೀಸರು ತಮ್ಮ ತಾಬಾ ತೆಗೆದುಕೊಂಡಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಹಾಗೂ ಡಿ.ವೈ ಎಸ್. ಪಿ. ರವಿ ಡಿ. ನಾಯ್ಕ ಇವರ ಮಾರ್ಗದರ್ಶನದಲ್ಲಿ ಸಿಪಿಐ ರಾಮಚಂದ್ರ ನಾಯಕ ಇವರ ನೇತೃತ್ವದಲ್ಲಿ ನಗರ ಠಾಣೆಯ ರಾಜಕುಮಾರ, ತನಿಕಾ ಪಿಎಐ ರತ್ನ ಕುರಿ, ಪ್ರೊಫೆಷನು ಪಿಪಿಐ ಅನುಪ್ ನಾಯಕ್, ಸಿಬ್ಬಂದಿಗಳಾದ ಪ್ರಶಾಂತ್ ಪಾವರ್, ಮಧುಕರ್ ಗಾಂವರ್, ನಾಗಪ್ಪ ಲಮಾಣಿ, ಪ್ರವೀಣ್, ಸದ್ದು ಹುಸೇನ್, ರಾಜು ಸಾಲಗಾಂವಿ, ರಮೇಶ ನಾಯಕ ಮುಂತಾದವರು ಪಾಲ್ಗೊಂಡಿದ್ದರು.