ವಿಶ್ವಸಂಸ್ಥೆ: ಅತ್ತ ಅಮೆರಿಕ ಇತ್ತ ಕಾಶ್ಮೀರದಲ್ಲಿ ಉಗ್ರ ನಡೆದ ಬೆನ್ನಲ್ಲೇ ಭಯೋತ್ಪಾದನೆ ಕುರಿತು ಕಿಡಿಕಾರಿರುವ ಭಾರತ ಸರ್ಕಾರದ ನೀತಿಯಲ್ಲೇ ಭಯೋತ್ಪಾದನೆ ಸಹಿಸಲಾಸಾಧ್ಯ ಎಂದು ತನ್ನ ಅಸಮಾಧಾನ ವ್ಯಕ್ತಪಡಿಸಿದೆ.ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ತಮ್ಮ ವಾದಮಂಡಿಸಿದ ಭಾರತದ ಪ್ರತಿನಿಧಿ ಯಡ್ಲಾ ಉಮಾಶಂಕರ್ ಅವರು, ಪಾಕಿಸ್ತಾನದ ಹೆಸರು ಪ್ರಸ್ತಾಪಿಸದಯೇ ಆ ದೇಶದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಭಯೋತ್ಪಾದನೆಯನ್ನು ತನ್ನ ಸರ್ಕಾರದ ನೀತಿಯ ಸಲಕರಣೆಯಾಗಿ ಬಳಕೆ ಮಾಡತ್ತಿರುವುದನ್ನು ಸಹಿಸಲು ಆಸಾಧ್ಯ.ಯಾರು ಕತ್ತಿಯಲ್ಲಿ ಆಟವಾಡುತ್ತಾರೆಯೇ ಅವರು ಕತ್ತಿಯಿಂದಲೇ ಸಾವನ್ನಪ್ಪುತ್ತಾರೆ ಎಂಬುದು ಇತಿಹಾಸದಿಂದಲೇ ತಿಳಿದಿದೆ. ಹೀಗಿದ್ದೂ ಕೆಲ ರಾಷ್ಟ್ರಗಳು ಭಯೋತ್ಪಾದನೆಗೆ ಪ್ರಾಯೋಜಕತ್ವ ವಹಿಸುತ್ತಿವೆ ಎಂದು ಹೇಳಿದರುಇದೇ ವೇಳೆ ಭಯೋತ್ಪಾದನೆ ಕುರಿತಂತೆ ಕಠಿಣ ನಿಲುವು ತಳೆಯುವ ತುರ್ತು ಅಗತ್ಯವಿದ್ದು, ಭಯೋತ್ಪಾದನೆ ಕುರಿತು ಯಾವುದೇ ದೇಶಗಳೂ ಕೂಡ ಆಯ್ಕೆಯ ವಿಧಾನಗಳನ್ನು ಅನುಸರಿಸದಂತೆ ಭಾರತ ಆಗ್ರಹಿಸಿದೆ. ಸಂಘಟಿತ ಹೋರಾಟದಿಂದ ಮಾತ್ರ ಭಯೋತ್ಪಾದನೆ ನಿರ್ಮೂಲನೆ ಸಾಧ್ಯ ಎಂದು ಹೇಳಿರುವ ಭಾರತ, ಸದಸ್ಯ ರಾಷ್ಟ್ರಗಳು ಯಾವುದೇ ಕಾರಣಕ್ಕೂ ಭಯೋತ್ಪಾದನೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ಆಗ್ರಹಿಸಿದೆ.ಪ್ರಮುಖವಾಗಿ ಭಯೋತ್ಪಾದಕ ಗುಂಪುಗಳ ಆರ್ಥಿಕ ನೆರವನ್ನು ಕಡಿತಗೊಳಿಸುವ ಮೂಲಕ ಅವುಗಳ ಶಕ್ತಿ ಕುಂದಿಸಬೇಕು. ಬಳಿಕ ಅವುಗಳಿಗೆ ನೆರವು ನೀಡುತ್ತಿರುವ ಸಾಮಾಜಿಕ ಸಂಘಟನೆಗಳನ್ನು ದೂರವಿರಿಸಬೇಕು ಎಂದು ಭಾರತ ಸಲಹೆ ನೀಡಿದೆ.ಭಾರತದ ವಾದಕ್ಕೆ ಪರೋಕ್ಷವಾಗಿ ಮನ್ನಣೆ ನೀಡಿದ ಚೀನಾ ಕೂಡ ಭಯೋತ್ಪಾದನೆ ಕುರಿತಂತೆ ವಿಶ್ವಸಂಸ್ಥೆ ತನ್ನ ತ್ವತ್ವ ಮತ್ತು ಉದ್ದೇಶಗಳನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು. ಆ ಮೂಲಕ ಸದಸ್ಯ ರಾಷ್ಟ್ರಗಳ ಪ್ರದೇಶಿಕ ಸಾರ್ವಭೌಮತ್ವ, ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಸಮಗ್ರತೆಯ ರಕ್ಷಣೆಗೆ ಮುಂದಾಗಬೇಕು ಎಂದು ಚೀನಾ ಪ್ರತಿನಿಧಿ ಶಿ ಕ್ಸಿಯೋಬಿನ್ ಹೇಳಿದರು.