ಯಲ್ಲಾಪುರ : ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ “ಹೆಬ್ಬಾರ್ ಡ್ರೀಮ್ ಫೌಂಡೇಷನ್ ಆಫ್ ಚಾರಿಟಿ ಟ್ರಸ್ಟ್” ವತಿಯಿಂದ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಮಿಕ ಖಾತೆ ಸಚಿವ ಶಿವರಾಮ್ ಹೆಬ್ಬಾರ್ ಅವರ ಕುಟುಂಬದ ವತಿಯಿಂದ ಕಳೆದ 20 ವರ್ಷಗಳಿಂದ ತಮ್ಮ ಸಂಸ್ಥೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸುತ್ತಿದ್ದು ಬುಧವಾರ ಸಚಿವ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಕಾಲೇಜು ವಿದ್ಯಾರ್ಥಿಗಳಿಗೆ ನೋಟ್ ಬುಕ್ ಗಳನ್ನು ವಿತರಿಸಿ ಮಾತನಾಡಿದರು.

RELATED ARTICLES  ನ್ಯಾಯ ಒದಗಿಸಲು ಬೇಡಿಕೆ : ಕುಮಟಾದಲ್ಲಿ ತರಬೇತಿ ಬಹಿಷ್ಕರಿಸಿ ಹೊರನಡೆದ ಶಿಕ್ಷಕರು.

ಸಚಿವ ಶಿವರಾಮ್ ಹೆಬ್ಬಾರ್ ಮತ್ತು ಅವರ ಕುಟುಂಬ ಯಲ್ಲಾಪುರದ ಜೀವನಾಡಿಯಾಗಿದ್ದಾರೆ. ಕ್ಷೇತ್ರದ ಅಮೂಲಾಗ್ರ ಅಭಿವೃದ್ಧಿ ಕಾರ್ಯಗಳಲ್ಲಿ ಅವರ ಕುಟುಂಬದ ಪಾತ್ರ ದೊಡ್ಡದಿದೆ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುನಂದದಾಸ್, ಉಪಾಧ್ಯಕ್ಷೆ ಶಾಮಿಲಿ ಪಾಟಣ್ಕರ್ ಮಾತನಾಡಿದರು.

ವೇದಿಕೆಯಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್, ಪ್ರಧಾನಕಾರ್ಯದರ್ಶಿ ಡಾ,ರವಿಭಟ್ಟ ಬರಗದ್ದೆ, ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಶಿರೀಷ್ ಪ್ರಭು, ಎಮ್.ಎಸ್. ಭಟ್ ಉಪಸ್ಥಿತರಿದ್ದರು. ಸಭೆಯಲ್ಲಿ ಪಟ್ಟಣ ಪಂಚಾಯತ್ ಸದಸ್ಯರಾದ ಸತೀಶ್ ಶಿವಾನಂದ ನಾಯ್ಕ್, ಅಮಿತ್ ಅಂಗಡಿ, ಮಾಜಿ ಸದಸ್ಯ ವಿನೋದ್ ತಳೇಕರ್ ಪಾಲ್ಗೊಂಡಿದ್ದರು. ಕಾಲೇಜಿನ ಪ್ರಾಂಶುಪಾಲ ಎಸ್.ಟಿ.ವೈಧ್ಯ ಸ್ವಾಗತಿಸಿದರು. ಉಪನ್ಯಾಸಕ ಗಾಂವ್ಕರ್ ನಿರೂಪಿಸಿದರು, ಎಸ್ ಆರ್ ನಾಯಕ ವಂದಿಸಿದರು.

RELATED ARTICLES  ಸೂರಜ್ ನಾಯ್ಕ ಸೋನಿ ಬಂಧನ ವಿರೋಧಿಸಿ ಮನವಿ: ಏನಾಗುತ್ತೆ ಮುಂದಿನ ನಡೆ?