ಕುಮಟಾ : ಶ್ರೀ ಕ್ಷೇತ್ರ ಧಾರೇಶ್ವರ ಮ್ಹಾತೋಬಾರ ಶ್ರೀ ಧಾರಾನಾಥ ದೇವಸ್ಥಾನದಲ್ಲಿ ವಾರ್ಷಿಕವಾಗಿ ಕಾರ್ತಿಕ ಅಮಾವಾಸ್ಯೆಯಂದು ನಡೆಯುವಂತೇ ವಿಶೇಷ ಲಕ್ಷ ಬಿಲ್ವಾರ್ಚನೆ, ದೀಪೋತ್ಸವ, ರಥೋತ್ಸವಾದಿ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ ಶ್ರೀ ದೇವರ ಪ್ರೀತ್ಯರ್ಥವಾಗಿ ಹವನಗಳು ಹಾಗೂ ನಂತರ ಪಂಚಾಮೃತ, ಏಕಾದಶ ರುದ್ರ, ನವಧಾನ್ಯ ಅಭಿಷೇಕ ಗಳು ನಡೆದವು. ನಂತರ ಒಂದು ಲಕ್ಷಕ್ಕೂ ಅಧಿಕ ಬಿಲ್ವಪತ್ರೆ ಗಳನ್ನು ಶಿವನಿಗೆ ಅರ್ಪಿಸಿ ರಾಜೋಪಚಾರ ಸೇವೆಯೊಂದಿಗೆ ಮಹಾಪೂಜೆ ಸಂಪನ್ನಗೊಂಡಿತು. ಈ ಕಾರ್ಯಗಳನ್ನು ದೇವಾಲಯದ ಅರ್ಚಕರುಗಳು ಹಾಗೂ ಉಪಾಧಿವಂತರು ನಡೆಸಿದರು.

RELATED ARTICLES  ಸ್ವಾಸ್ಥ್ಯ ಮತ್ತು ಪರಿಸರ ರಕ್ಷಣೆ ಅಗತ್ಯ : ನಾಗರಾಜ ನಾಯಕ

ರಾತ್ರಿ ದೀಪೋತ್ಸವ.


ದೇವಸ್ಥಾನದ ಒಳ- ಹೊರ ಪ್ರಾಂಗಣದಿಂದ ರಥಬೀದಿಯ ವರೆಗೂ ಸಹಸ್ರಾರು ದೀಪಗಳನ್ನು ಬೆಳಗಿಸಿದರು. ದೇವಾಲಯದ ಶಿಖರದ ಮೇಲೆ ಕುಂಬಳಕಾಯಿಯ ವಿಶೇಷ ದೀಪ ಬೆಳಗಿಸುವ ಸಂಪ್ರದಾಯವೂ ಇಲ್ಲಿಯ ವೈಶಿಷ್ಟ್ಯ. ಅಂತೆಯೇ ರಥೋತ್ಸವವೂ ಬಲು ಸಡಗರದಿಂದ ನಡೆಯಿತು.

RELATED ARTICLES  ಲೈಫ್ ಲೈನ್ ಸಂಚಾರಿ ರೈಲು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಹೇಕ್ ಸಿಕ್ಕಾ ಅವರಿಗೆ ರೋಟರಿಯಿಂದ ಅಭಿನಂದನೆ!

ಈ ಉತ್ಸವಗಳಿಗೆ ಊರಿನ ಹಾಗೂ ನೆರೆಯ ಊರುಗಳಿಂದ ಹಲವಾರು ಭಕ್ತರು ಬಂದು ದೇವರ ದರ್ಶನ ಪಡೆದರು. ದೀಪ ಬೆಳಗಿಸಿ ಇಷ್ಟಾರ್ಥಗಳನ್ನು ಪ್ರಾರ್ಥಿಸಿಕೊಂಡರು.

ಸಿಡಿಮದ್ದುಗಳ ಪ್ರದರ್ಶನವೂ ಬಹಳ ಆಕರ್ಷಕವಾಗಿತ್ತು. ಬಂದಂತಹ ಭಕ್ತಾದಿಗಳಿಗೆಲ್ಲ ಪ್ರಸಾದ ವಿತರಣೆಯೂ ಇತ್ತು.

ಈ ಸುದ್ದಿಗಳನ್ನೂ ಓದಿ.