ಕರ್ನಾಟಕದ ಪ್ರಸಿದ್ಧ ದೇವಿ ಮಂದಿರಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡದ ಗುಡೇ ಅಂಗಡಿಯ ಶ್ರೀ ಕಾಂಚಿಕಾ ಪರಮೇಶ್ವರಿ ದೆವಿಯ ಪವಾಡಗಳು ಅನನ್ಯ ವಾದದ್ದು ಅಂತೆಯೇ ಈ ದೇವಿಯನ್ನು ಇಲ್ಲಿ ಪ್ರತಿಷ್ಡಾಪಿಸಿದ ರಾಜ ಋಷಿ ಕಲಭದೇವರ ಮಹಿಮೆಯೂ ಕೂಡ ಅಷ್ಟೇ ಮಹತ್ವದ್ದಾಗಿದೆ .
ಈ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆಯೂ ದಿನದಿಂದ ಹೆಚ್ಚುತ್ತಿದೆ ಕುಮಟಾದಿಂದ ಅಘನಾಶಿನಿ ಮುಖ್ಯ ರಸ್ತೆಗೆ ಹೊಂದಿಕೊಂಡಹಾಗೆ ಇರುವ ಚಿಕ್ಕದೊಂದು ದೇಗುಲ .
ಆ ದೇಗುಲದ ಹೆಸರು ಕಲಭದೇವ ಮಂದಿರ. ಸ್ಥಳೀಯರು ಇದನ್ನು ಕಡಬಜ್ಜನ ದೇವಸ್ಥಾನ ಎಂದೇ ಕರೆಯುತ್ತಾರೆ.
ಈ ಕಲಭದೇವರ ಮಹಿಮೆ ಅಪಾರ ವಾದದ್ದು. ಪಾದದಲ್ಲಿ ಕಾಣುವ ಮೀನಕಣ್ಣಿ ನ ಸಮಸ್ಯೆಗೆ ಈ ದೇವರಿಗೆ ಬೆಳ್ಳಿಕಣ್ಣಿನ ಹರಕೆ ಹೊತ್ತುಕೊಂಡರೆ ಅಚ್ಚರಿಯ ರೀತಿಯಲ್ಲಿ ವಾಸಿಯಾಗುವುದೆಂಬ ನಂಬಿಕೆ ಇದೆ..ಅದೇ ರೀತಿ ಚಿಕ್ಕ ಶಿಶುಗಳು ಹಟಮಾರಿ ಸ್ವಭಾವದವರಾಗಿ ನಿದ್ರಾಹೀನತೆಯ ಸಮಸ್ಯೆ ಎದುರಿಸುತ್ತ ಇದ್ದರೆ ಈ ದೇವಸ್ಥಾನದ ಒಳಗಿನಿಂದ ಮಣ್ಣನ್ನು ಮಕ್ಕಳಿಗೆ ತಿನ್ನಿಸುವುದರಿಂದ ಅವರ ಸ್ವಭಾವ ಬದಲಾಗುತ್ತದೆ ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.
ಈ ಕಲಭದೇವರೇ ಬಾಡದ ಕಾಂಚಿಕಾ ಪರಮೇಶ್ವರಿಯನ್ನು ಕಂಚಿಯಿಂದ ತಂದು ಗುಡೇ ಅಂಗಡಿಯಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ ಎನ್ನಲಾಗಿದೆ.ಕಲಭದೇವರಿಗೆ ಇಲ್ಲಿನ ಪ್ರತೀ ಆಚರಣೆಯಲ್ಲಿಯೂ ಮಹತ್ವದ ಸ್ಥಾನಮಾನ ನೀಡಲಾಗುತ್ತದೆ.ದೇವಿಯ ಪ್ರತೀ ಉತ್ಸವ ಜಾತ್ರೆಯ ಸಂದರ್ಭದಲ್ಲಿ ಕಾಂಚಿಕಾ ಪರಮೇಶ್ವರಿ ಹಾಗೂ ಪರಿವಾರ ದೇವರು ಕಲಭದೇವರ ಸನ್ನಿಧಿಗೆ ಬಂದು ಹೋಗುವ ಸಂಪ್ರದಾಯ ಇದೆ. ನೀವೂ ಒಮ್ಮೆ ಈ ಮಂದಿರಕ್ಕೆ ಭೇಟಿ ನೀಡಿ ಕಲಭ ದೇವರ ಅನುಗ್ರಕ್ಕೆ ಪಾತ್ರರಾಗಿ.