ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದಲ್ಲಿ ಗದ್ದೆಗೆ ನೀರು ಹಾಯಿಸಲು ಹೋಗಿದ್ದ ವಿದ್ಯಾರ್ಥಿ ವಿದ್ಯುತ್ ಸ್ಪರ್ಶಿಸಿ ಧಾರುಣ ಸಾವನ್ನಪ್ಪಿದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಕುಟುಂಬದವರು ಮೃತ ಯುವಕನ ಕಣ್ಣನ್ನು ದಾನ ಮಾಡುವುದರ ಮೂಲಕ ಸಾವಲ್ಲೂ ಸಾರ್ಥಕತೆ ಮೆರೆಯುವಂತೆ ಮಾಡಿದ್ದಾರೆ.

ಹುನಗುಂದ ಗ್ರಾಮದ ಜಿನೇಂದ್ರ ಪಾರ್ಶ್ವನಾಥ
ಬಸ್ತವಾಡ (18) ಮೃತ ಪಟ್ಟ ಯುವಕ. ಗದ್ದೆಯಲ್ಲಿ ಬೋರವೆಲ್ ಶುರು ಮಾಡಲು ಹೋಗಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಹಿಡಿದು ವಿದ್ಯುತ್ ಪ್ರವಹಿಸಿದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದು,ಬಿದ್ದಿದ್ದ ಯುವಕನನ್ನು ತಕ್ಷಣವೇ ತಾಲೂಕಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

RELATED ARTICLES  ಅವ್ಯವಸ್ಥೆಯ ಆಗರವಾಗಿದೆ ಗೋಕರ್ಣದ ಬಸ್ ನಿಲ್ದಾಣ.

ಈ ಕುರಿತಾಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಪಟ್ಟ ಯುವಕನ ಕುಟುಂಬದವರು ಯುವಕನ ನೇತ್ರದಾನ ಮಾಡಲು ನಿರ್ಧರಿಸಿ ನಂತರ ಶಿರಸಿಯ ಲಯನ್ಸ್ ನಯನ ನೇತ್ರ ಭಂಡಾರಕ್ಕೆ ಸಂಪರ್ಕಿಸಿದರು. ತಕ್ಷಣವೇ ಸ್ಥಳಕ್ಕಾಗಮಿಸಿದ ನೇತ್ರ ತಂಡದವರು ಯುವಕನ ನೇತ್ರಗಳನ್ನು ಸುರಕ್ಷಿತವಾಗಿ ಪಡೆದುಕೊಂಡು ಹೋಗಿದ್ದಾರೆ. ಮೃತ ಯುವಕನಿಂದ ಮತ್ತೆರಡು ಅಂಧರಿಗೆ ಬೆಳಕು ತುಂಬಿದಂತಾಗಿದೆ. ಯುವಕನ ಕುಟುಂಬದವರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ.

RELATED ARTICLES  ಕುಮಟಾದಲ್ಲಿ ಕೊಂಕಣಿಮಾನ್ಯತಾ ದಿವಸಾಚರಣೆಯ ಸಂಭ್ರಮದ ಕಾರ್ಯಕ್ರಮ