ಕುಮಟಾ : ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್(ರಿ )ನ ಬಿಜಿಎಸ್ ಕೇಂದ್ರೀಯ ವಿದ್ಯಾಲಯ, ಮಿರ್ಜಾನಿನಲ್ಲಿ ದಿನಾಂಕ 26-11-2022ರಂದು ಭಾರತದ ಸಂವಿಧಾನ ದಿನಾಚರಣೆ ಆಚರಿಸಲಾಯಿತು. ಪ್ರಾಂಶುಪಾಲರಾದ ಶ್ರೀಮತಿ ಲೀನಾ ಗೊನೇಹಳ್ಳಿ ಸಂವಿಧಾನ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ಹಿರಿಯ ಶಿಕ್ಷಕರಾದ ಶ್ರೀ ಎಂ. ಜಿ. ಹಿರೇಕುಡಿಯವರು ಸಂವಿಧಾನ ಹೇಗೆ, ಯಾವಾಗ ರಚನೆ ಆಯಿತು, ಅದರ ಸಮಿತಿಯ ಸದಸ್ಯರು, ಅಧ್ಯಕ್ಷರು ಯಾರು? ಭಾರತದ ಸಂವಿಧಾನದಲ್ಲಿ ಬರುವ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು.

RELATED ARTICLES  ಚರಂಡಿಯಲ್ಲಿ ಮಣ್ಣು ಮಳೆ ನೀರು ಮನೆಗೆ : ಸ್ಥಳಕ್ಕೆ‌ ಶಾಸಕರ ಭೇಟಿ.

ಕುಮಾರಿ ಸಿಂಚನಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕುಮಾರಿ ಪ್ರಜ್ಞಾ ಸೂರಿ ಸ್ವಾಗತಿಸಿದಳು. ಕುಮಾರಿ ಸಮೀಕ್ಷಾ ಜೈನ್ ಭಾರತದ ಸಂವಿಧಾನದ ಪೀಠಿಕೆಯನ್ನು ಓದಿದಳು. ಕುಮಾರಿ ಶಾಂಭವಿ ಮತ್ತು ಸಂಗಡಿಗರು ಭಾರತದ ಸಂವಿಧಾನದ ಕುರಿತು ಗೀತೆಯನ್ನು ಹಾಡಿದರು. ಕುಮಾರಿ ಶುಮೈಲಾ ಮತ್ತು ಸಂಗಡಿಗರು “ಭಾರತದ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು” ಎಂಬ ಸ್ಕಿಟ್ ಪ್ರಸ್ತುತಪಡಿಸಿದರು. ಕುಮಾರಿ ತನುಶ್ರೀ ನಾಯ್ಕ ಕಾರ್ಯಕ್ರಮ ನಿರೂಪಿಸಿದಳು. ಭಾರತದ ಸಂವಿಧಾನದ ಮಹತ್ವದ ಬಗ್ಗೆ ದೃಶ್ಯಾವಳಿಯ ಮೂಲಕ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಕುಮಾರಿ ದಿಯಾ ನಾಯಕ ವಂದಿಸಿದಳು.

RELATED ARTICLES  ಮತ್ತೆ ಅರ್ಧ ಶತಕದ ಗಡಿ ದಾಟಿದ ಉತ್ತರ ಕನ್ನಡದ ಕೊರೋನಾ ಪಾಸಿಟೀವ್ ಸಂಖ್ಯೆ