ಹೊನ್ನಾವರ: ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಬಿದ್ದು ಈರ್ವರು ಮೃತಪಟ್ಟಿರುವ ಘಟನೆ ನಡೆದಿದೆ. ಹೊನ್ನಾವರ ಸಂಶಿಯ ಶಂಕರ ನಾಯ್ಕ (58) ಎನ್ನುವವರು ನಾಮಧಾರಿಕೇರಿಯಲ್ಲಿ ಓರ್ವರ ತೋಟದಲ್ಲಿ ತೆಂಗಿನ ಮರ ಏರಿ ಕಾಯಿ ಕೋಯ್ದು ಕೆಳಗೆ ಇಳಿಯುತ್ತಿದ್ದಾಗ ಜಾರಿ ಬಿದ್ದಿದ್ದು, ಅಸ್ವಸ್ಥಗೊಂಡಿದ್ದ ಅವರನ್ನು ಸೇಂಟ್ ಇಗ್ನೇಶಿಯಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮೃತಪಟ್ಟಿದ್ದಾರೆ.
ಯಲ್ಲಾಪುರದಲ್ಲೂ ಓರ್ವನ ಸಾವು
ಯಲ್ಲಾಪುರದ ದೇಹಳ್ಳಿಯ ಗಣೇಶ ದೇವಳಿ (52) ಎನ್ನುವವರು ಬಿಸಗೋಡದಲ್ಲಿ ಓರ್ವರ ತೋಟದಲ್ಲಿ ಅಡಿಕೆ ಮರ ಹತ್ತಿ ಅಡಿಕೆ ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಎರಡೂ ಪ್ರಕರಣದಲ್ಲಿ ಸ್ಥಳೀಯ ಠಾಣೆಗಳಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ.