ಅಂಕೋಲಾ : ಮನೆಯಲ್ಲಿ ಯಾರಿಗೂ ತಿಳಸದೇ ಹೊರಗೆ ಹೋದವ ವ್ಯಕ್ತಿಯೋರ್ವರು ಮನೆಗೆ ಮರಳಿ ಬರದೇ ಕಾಣೆಯಾಗಿರುವುದಾಗಿ ತಿಳಿದು ಬಂದಿದೆ. ತಾಲೂಕಿನ ವಂದಿಗೆ ಹನುಮಟ್ಟ ನಿವಾಸಿ ಲಾರಿ ವುಡ್ ಕೆಲಸ ಮಾಡುತ್ತಿದ್ದ ಶಿವಾನಂದ ಗುತ್ತಿ ನಾಯ್ಕ ಕಾಣೆಯಾದ ವ್ಯಕ್ತಿ ಯಾಗಿದ್ದು, ನವೆಂಬರ್ 17 ರಂದು ರಾತ್ರಿ ಊಟ ಮಾಡಿ ಮಲಗಿದ್ದವರು ಯಾರಿಗೂ ಹೇಳದೆ ಮನೆಯಿಂದ ಹೊರಗೆ ಹೋಗಿದ್ದು ,ಮರುದಿನ ಬೆಳಿಗ್ಗೆ ಅಂಕೋಲಾ ರೈಲ್ವೆ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿರುವುದಾಗಿ ಮಗನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.

RELATED ARTICLES  ಕ್ರೀಡೆಗಳು ಮಾನವನ ದೈಹಿಕ & ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. : ತೊರ್ಕೆ

ಕಾಣೆಯಾದ ವ್ಯಕ್ತಿಯನ್ನು ಹುಡುಕುವ ಪ್ರಯತ್ನ ಮಾಡಿದರೂ ಪತ್ತೆಯಾಗದ ಕಾರಣ ಅವರ ಪತ್ನಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತಮ್ಮ ಕಾಣೆಯಾದ ತಮ್ಮ ಗಂಡನನ್ನು ಹುಡುಕಿ ಕೊಡುವಂತೆ ಕೋರಿದ್ದಾರೆ.

RELATED ARTICLES  ಟಿಕೇಟ್ ಸಿಗದ ಹತಾಶೆ: ಬೇಳೂರು ಬೆಂಬಲಿಗರಿಂದ ರೌಡಿಸಂ..‌.?

ವ್ಯಕ್ತಿಯ ಕುರಿತು ಮಾಹಿತಿ ಸಿಕ್ಕಲ್ಲಿ ಅಂಕೋಲಾ ಪೊಲೀಸ್ ಠಾಣೆ 0838822033 ಸಂಖ್ಯೆಗೆ ಅಥವಾ 9480805250 ಮೊಬೈಲ್ ಸಂಖ್ಯೆಗೆ, ಇಲ್ಲವೇ ತಮ್ಮ ಹತ್ತಿರದ ಪೋಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅಂಕೋಲಾ ಪೊಲೀಸರು ಪ್ರಕಟನೆಣೆಯಲ್ಲಿ ತಿಳಿಸಿದ್ದಾರೆ.