ಶಿರಸಿ: ಉತ್ತರಕನ್ನಡ ಜಿಲ್ಲಾಡಳಿತ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉತ್ತರಕನ್ನಡ ಉಪನಿರ್ದೇಶಕರ ಕಚೇರಿಯಿಂದ ಕಾರವಾರದಲ್ಲಿ ಏರ್ಪಡಿಸಿದ್ದ, 2022-23ನೇ ಸಾಲಿನ ರಾಜ್ಯಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಚೆಸ್ ಪಂದ್ಯಾವಳಿಯ 14 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ನಗರದ ಲಯನ್ಸ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಕುಮಾರ ಅಭಿನೀತ ಭಟ್ ಪ್ರಥಮ ಸ್ಥಾನ ವಿಜೇತನಾಗಿದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಎಂದು ತಿಳಿದುಬಂದಿದೆ.

ನವೆಂಬರ್ 24 ರಿಂದ 26 ನವೆಂಬರ್ ವರೆಗೆ ನಡೆದ ಈ ಪಂದ್ಯಾವಳಿಯ 9 ಸುತ್ತುಗಳಲ್ಲಿ 8 ಅಂಕ ಪಡೆಯುವದರೊಂದಿಗೆ ಶಿರಸಿ ಜಿಲ್ಲೆನ್ನು ಪ್ರತಿನಿಧಿಸಿದ್ದ ಅಭಿನೀತ್ ಈಗ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾನೆ. ಈ ಮೂಲಕ ಶಿರಸಿಗೆ ಹೆಮ್ಮೆ ತಂದಿರುವ ಬಾಲಕನಾಗಿ ಹೊರಹೊಮ್ಮಿದ್ದು, ಶಿರಸಿ ಲಯನ್ಸ ಶಾಲೆ ರಾಷ್ಟ್ರಮಟ್ಟದ ಸಾಧನೆಯನ್ನು ಮತ್ತೊಮ್ಮೆ ಪುನರಾವರ್ತಿಸಿದೆ ಎನ್ನಲಾಗಿದೆ.

RELATED ARTICLES  ನಾಮಧಾರಿ ಅಭ್ಯರ್ಥಿ ಕಡೆಗಣಿಸಿಲ್ಲ ಅಂದ್ರು ದೇಶಪಾಂಡೆ.

ಈ ಸುದ್ದಿಗಳನ್ನೂ ಓದಿ.

ವಿಜೇತ ವಿದ್ಯಾರ್ಥಿಯನ್ನು, ಪಾಲಕರಾದ ದತ್ತಾತ್ರೇಯ ಭಟ್ ಹಾಗೂ ಶ್ರೀಮತಿ ಮಂಗಲಾ ದತ್ತಾತ್ರೇಯ ಭಟ್ ದಂಪತಿಗಳನ್ನು, ಸಹಕರಿಸಿದ ಶಿಕ್ಷಣ ಇಲಾಖಾಧಿಕಾರಿಗಳನ್ನು ಹಾಗೂ ತರಬೇತುದಾರರನ್ನು ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ವೃಂದ, ಶಿರಸಿ ಲಯನ್ಸ್ ಕ್ಲಬ್ ಬಳಗ ಮತ್ತು ಲಯನ್ಸ ಶಾಲಾ ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ವೆಂಕಟೇಶ ನಾರಾಯಣ ಪ್ರಭು.