ಕಾರವಾರ : ಇದೀಗ ಎಲ್ಲಿ ನೋಡಿದರೂ ಕಾಂತಾರ ಚಲನಚಿತ್ರದ ವಿವಿಧ ದೃಶ್ಯಾವಳಿಗಳು ಜನರನ್ನು ಮಂತ್ರಮುಗ್ದಗೊಳಿಸುತ್ತಿದೆ. ಕಾರವಾರ ತಾಲ್ಲೂಕಿನ ಅಮದಳ್ಳಿಯ ನಾರಾಯಣ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಹಾಲಕ್ಕಿಗಳ ಹಗರಣ ಇದೀಗ ಮತ್ತೆ ಈ ಕಾಂತಾರದ ಪಂಜುರ್ಲಿಯ ಪ್ರತ್ಯಕ್ಷದ ಮೂಲಕ ಜನ ಮೆಚ್ಚುಗೆ ಗಳಿಸಿದೆ. ಈ ಪ್ರದರ್ಶನಕ್ಕೆ ಸಾವಿರಾರು ಜನ ಸಾಕ್ಷಿಯಾದರು.

ಕಾರವಾರ ತಾಲ್ಲೂಕಿನ ಅಮದಳ್ಳಿ ಗ್ರಾಮದಲ್ಲಿ ಹಾಲಕ್ಕಿ ಬುಡಕಟ್ಟು ಸಮಾಜದವರು ಕಾರ್ತಿಕ ಮಾಸದಲ್ಲಿ ಆಚರಿಸುವ ನಾರಾಯಣ ದೇವರ ಜಾತ್ರೆಯನ್ನ ದಿಂಡಿ ಜಾತ್ರೆಯೆಂದು ಕರೆಯಲಾಗುತ್ತದೆ. ಈ ಜಾತ್ರೆಯಲ್ಲಿ ಅಣುಕು ಪ್ರದರ್ಶನ ಮಾಡುವ ಹಗರಣ ಉತ್ಸವ ಆಯೋಜಿಸುವುದೇ ಇಲ್ಲಿನ ವಿಶೇಷ. ಬ್ರಿಟಿಷರ ಕಾಲದಿಂದ ಹಾಲಕ್ಕಿ ಸಮುದಾಯದವರು ಈ ಹಗರಣ ಉತ್ಸವವನ್ನ ನಡೆಸಿಕೊಂಡು ಬರುತ್ತಿದ್ದು, ಇಂದಿಗೂ ಮುಂದುವರಿದಿದೆ.

RELATED ARTICLES  ಬಸ್ ಸಮಯ ಬದಲಾವಣೆಗೆ ವಿರೋಧ : ಬಸ್ ತಡೆದು ಪ್ರತಿಭಟನೆ

ಈ ಬಾರಿಯ ಹಗರಣ ಉತ್ಸವದಲ್ಲಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿರುವ ಕಾಂತಾರ ಚಿತ್ರದ ದೈವ ನರ್ತಕ, ಕೊರಗಜ್ಜ ಹಾಗೂ ಬೃಹತ್ ಗಾತ್ರದ ಪಂಜುರ್ಲಿ ನೆರೆದಿದ್ದ ಜನರ ಮೆಚ್ಚುಗೆಗೆ ಪಾತ್ರವಾದವು. ಇದರೊಂದಿಗೆ ಬೃಹತ್ ಗಾತ್ರದ ತೋಳ, ಕೋಸ್ಟ್ ಗಾರ್ಡ್‌ನ ವಿಮಾನ, ವಿವಿಧ ದೇವರ ಮಾದರಿಗಳನ್ನ ಸಹ ಪ್ರದರ್ಶಿಸಲಾಯಿತು. ಜೊತೆಗೆ ಕೋಣ, ಯಕ್ಷಗಾನ, ಅಯ್ಯಪ್ಪಸ್ವಾಮಿ ಮಹಿಮೆ ಸೇರಿದಂತೆ ಹತ್ತು ಹಲವು ಅಣುಕು ಪ್ರದರ್ಶನವನ್ನ ಮಾಡಲಾಯಿತು.

RELATED ARTICLES  ಬರಲಿದೆ ಸಿಮ್ ಕಾರ್ಡ್ ಇರುವ ಲ್ಯಾಪ್’ಟಾಪ್! ಜಿಯೋದಿಂದ ಮತ್ತೊಂದು ಆವಿಷ್ಕಾರ

ಈ ಸುದ್ದಿಗಳನ್ನು ಓದಿ.

ಈ ಉತ್ಸವವನ್ನ ಕಣ್ಣುಂಬಿಕೊಳ್ಳುವುದಕ್ಕಂತಾನೇ ಅಕ್ಕಪಕ್ಕದ ಗ್ರಾಮಗಳ ನೂರಾರು ಮಂದಿ ಆಗಮಿಸಿದ್ದು, ಬಂದಂತಹ ಪ್ರೇಕ್ಷಕರು ವಿಭಿನ್ನ ವೇಷಗಳನ್ನ ವೀಕ್ಷಿಸಿ ಫೋಟೋ, ವಿಡಿಯೋ ತೆಗೆದುಕೊಂಡು ಖುಷಿಪಟ್ಟರು.