ಕುಮಟಾ : ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲುದ್ದು, ದೊಡ್ಡ ದೊಡ್ಡ ಪಟ್ಟಣಗಳಲ್ಲಿ ನಡೆಯುತ್ತಿದ್ದ ಇಂತಹ ಪ್ರಕರಣಗಳು ಇದೀಗ ಕುಮುಟಾ ತಾಲೂಕಿನಲ್ಲಿಯೂ ನಡೆದಿರುವ ಬಗ್ಗೆ ವರದಿಯಾಗಿದೆ. ಯುವತಿ ಗರ್ಬಿಣಿಯಾಗಿರುವ ವಿಷಯ ತಿಳಿದು ಕಂಗಾಲಾದ ಮನೆಯವರು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಪರಿಣಾಮ ಇಬ್ಬರು ಯುವಕರನ್ನು ಕುಮಟಾ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಾಲಕಿಯ ಹೇಳಿಕೆ ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕೋನಳ್ಳಿಯ ಅಖಿಲ್ ಈಶ್ವರ್ ಅಡಿಗುಂಡಿ ಮತ್ತು ಹೊನ್ನಾವರ ಕಡತೋಕಾದ ಸಮರ್ಥ ಜಟ್ಟಿ ಮುಕ್ರಿ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,, ನ್ಯಾಯಾಂಗಬಂಧನ ವಿಧಿಸಲಾಗಿದೆ. ಆಟೋದಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.