ಕುಮಟಾ : ಪ್ರತಿಯೊಂದು ಸ್ಥಳ ಹಾಗೂ ಪ್ರತಿಯೊಂದು ಜನಾಂಗಗಳು ಒಂದೊಂದು ವಿಶೇಷತೆಗಳಿಂದ ತಮ್ಮ ಸಂಪ್ರದಾಯವನ್ನು ಆಚರಿಸುತ್ತಿವೆ. ಅಂತವುಗಳಲ್ಲಿ ಉತ್ತರಕನ್ನಡದ ಅನೇಕ ಭಾಗಗಳು ಪ್ರಸಿದ್ಧಿ ಪಡೆದುಕೊಂಡಿದೆ. ಊರಿನವರು ಎಲ್ಲರೂ ಒಟ್ಟಾಗಿ ಸೇರಿ ಪ್ರಸಾದ ರೂಪದಲ್ಲಿ ದೋಸೆ ಸ್ವೀಕರಿಸುವ ವಿಶಿಷ್ಟ ದೋಸೆ ಕಂಬಳ ಗೋಕರ್ಣದ ವೇ.ಬಾಲಕೃಷ್ಣ ಜಂಭೆ ಮನೆಯಲ್ಲಿ ನಡೆಯಿತು.
ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯದ ಮಂದಿರದ ನಂದಿಮಂಟಪದಲ್ಲಿ ತೀರ್ಥ ಪ್ರಸಾದ ನೀಡುವ ಮನೆತನದವರು ದೇವರ ಪ್ರಸಾದ ರೂಪದಲ್ಲಿ ದೋಸೆ ತಯಾರಿಸಿ ನೀಡಲಾಗುತ್ತದೆ. ಸಂಜೆ ದೇವಾಲಯದಲ್ಲಿ ಎಡೆ ಪೂಜೆ ಆದ ನಂತರ ಈ ದೋಸೆ ಭಕ್ತರಿಗೆ ನೀಡುತ್ತಾರೆ. ಆತ್ಮಲಿಂಗಕ್ಕೆ ನವಧಾನ್ಯಗಳ ಅಭಿಷೇಕ ನಡೆದ ನಂತರ ಈ ಒಂಭತ್ತು ಧಾನ್ಯಗಳನ್ನು ಸಂಗ್ರಹಿಸಿ ಅಕ್ಕಿಯೊಂದಿಗೆ ಬೆರೆಸಿ ದೋಸೆ ತಯಾರಿಸಿ ದೇವರ ಪ್ರಸಾದ ರೂಪದಲ್ಲಿ ದೋಸೆ ತಯಾರಿಸಿ ದೇವರ ಪ್ರಸಾದ ರೂಪದಲ್ಲಿ ನೀಡುವುದು ವಾಡಿಕೆಯಾಗಿದೆ.
ಪರಂಪರೆಯಂತೆ ಅನಾದಿಕಾಲದಿಂದಲೂ ನಂದಿ ಮಂಟಪದಲ್ಲಿ ಕಾರ್ಯ ನಿರ್ವಹಿಸುವವರು ಆಯಾ ವರ್ಷ ಯಾವ ಮನೆತನದ ಪಾಳಿ ಬರುತ್ತದೆಯೋ ಆ ಮನೆಯಲ್ಲೇ ದೋಸೆ ಕಂಬಳ ನಡೆಯುತ್ತದೆ. ಇಲ್ಲಿ ಊರಿನ ಎಲ್ಲಾ ಸಮುದಾಯದವರು ಬಂದು ಪ್ರಸಾದ ಸ್ವೀಕರಿಸುವುದು ವಿಶೇಷ.