ಕಾರವಾರ: ತಾಲೂಕಿನ ಎಂಜಿ ರಸ್ತೆಯಲ್ಲಿರುವ ಭೂ ಮಾಪನ ಇಲಾಖೆಯ ಶೆಡ್ಡಿನಲ್ಲಿ ನಿಲ್ಲಿಸಿಟ್ಟಿದ್ದ ಸುಮಾರು ೯ ಬೈಕ್ ಗಳು ಬೆಂಕಿಗಾಹುತಿಯಾಗಿದೆ.ಯಾರೋ ಕಿಡಿಗೇಡಿಗಳು ಶನಿವಾರ ತಡರಾತ್ರಿ ಬೆಂಕಿ ಹೆಚ್ಚಿದ್ದಾರೆ ಎಂದು ವರದಿ ಬಂದಿದೆ.

RELATED ARTICLES  ಯಕ್ಷಗಾನ ಒಂದು ಸಂಪೂರ್ಣ ಕಲೆ ಅದಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಅಗತ್ಯ ಇದೆ : ಎಂ.ಜಿ ಭಟ್ಟ

ಇಲ್ಲಿಂದ ವಿವಿಧೆಡೆ ಕೆಲಸಕ್ಕೆ ತೆರಳುವ ಸ್ಥಳೀಯರು ಇದೇ ಶೆಡ್ ನಲ್ಲಿ ಪ್ರತಿದಿನ ಬೈಕ್ ಇಟ್ಟು ತೆರಳುತ್ತಿದ್ದರು. ಆಗ ಕೆಲವರು ಬಂದು ಅವರ ಬೈಕುಗಳಿಂದ ಪೆಟ್ರೋಲ್ ಅನ್ನು ಕದಿಯುತ್ತಿದ್ದರು. ಆದರೆ ನಿನ್ನೆ ತಡರಾತ್ರಿ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಎಂದು ಸ್ಥಳೀಯರೊಬ್ಬರು ತಿಳಿಸಿದರು.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತನಿಖೆಯ ನಂತರ ಸತ್ಯ ಹೊರ ಬರಲಿದೆ.

RELATED ARTICLES  ಉತ್ತರ ಕನ್ನಡದಲ್ಲಿ ಆರು ಜನರಿಗೆ ಇಂದು ಕೊರೋನಾ : ಬೆಚ್ಚಿ ಬೀಳಿಸಿದೆ ಕೆಲವು ಪ್ರಕರಣ