ಕಾರವಾರ : ಇತ್ತೀಚಿನ ದಿನಗಳಲ್ಲಿ ಸೈಬರ್ ಪ್ರಕರಣಗಳು ಹೆಚ್ಚುತ್ತಿದ್ದು ಮೆಸೇಜ್ ಕಳಿಸುವುದು ಕಾಲ್ ಮಾಡುವುದರ ಮೂಲಕ ಗ್ರಾಹಕರ ಖಾತೆಗೆ ಕನ್ನ ಹಾಕುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇಂತಹದೇ ಪ್ರಕರಣ ಒಂದು ಇದೀಗ ನಡೆದಿದ್ದು ವ್ಯಕ್ತಿಯ ಚಾಣಾಕ್ಷತನದಿಂದಾಗಿ ಪ್ರಯತ್ನ ವಿಫಲವಾದ ಘಟನೆ ನಡೆದಿದೆ. ನಗರದ ಶುಭಂ ಕಳಸ ಅವರ ಮಾಲೀಕತ್ವದ ಲಲಿತ್ ಎಂಟರ್ಪ್ರೈಸಸ್‌ಗೆ ಸಿಐಎಸ್ಎಫ್ ಸಿಬ್ಬಂದಿ ಹೆಸರಿನಲ್ಲಿ ಕರೆ ಮಾಡಿ ಸಿಮೆಂಟ್ ಬ್ಲಾಕ್ಸ್ ಅವಶ್ಯಕತೆ ಇದೆಯೆಂಬ ನೆಪದಲ್ಲಿ ಆನ್‌ಲೈನ್ ವಂಚನೆ ನಡೆಸಲು ಯತ್ನಿಸಿ ವಿಫಲರಾಗಿದ್ದಾರೆ.

ಮಾಜಾಳಿಯ ಬಾವಳ ಗ್ರಾಮದ ಫಿಶರೀಸ್ ಶಾಲೆಗೆ 2000 ಸಿಮೆಂಟ್ ಬ್ಲಾಕ್ಸ್ ಬೇಕಿದೆ ಎಂದು ಕರೆ ಮಾಡಿದ್ದ ವಂಚಕ,ಶಾಲೆಯ ವಿಳಾಸದ ಗೂಗಲ್ ಮ್ಯಾಪ್ ಕೂಡ ಕಳುಹಿಸಿ ಫೋನ್ ಪೇ ಮೂಲಕ ಹಣ ಸಂದಾಯ ಮಾಡುವುದಾಗಿ ನಂಬಿಸಿದ್ದಾರೆ. ಶುಭಂ ಕೂಡ ಈತನ ಮಾತು ನಂಬಿ ತಮ್ಮಟ್ರಕ್ ಮೂಲಕ ಸಿಮೆಂಟ್ ಬ್ಲಾಕ್ಸ್ ಕಳುಹಿಸಿಕೊಟ್ಟಿದ್ದಾರೆ. ಬ್ಲಾಕ್ಸ್ ಶಾಲೆಗೆ ತೆರಳುವಷ್ಟರೊಳಗೆ
ಎರಡು ಬಾರಿ ತಾವು ಸೇನೆಯ ಸಿಬ್ಬಂದಿ ಎಂದು ಹೇಳಿಕೊಂಡು ಕರೆ ಮಾಡಿದವರು, ಬ್ಲಾಕ್ಗಳ ಹಣ ಸಂದಾಯ ಮಾಡಲು ಕ್ಯೂಆರ್ ಕೋಡ್ ಸ್ಕಾರ್‌ಯನ್ ಮಾಡಲು ತಿಳಿಸಿದ್ದಾರೆ.

RELATED ARTICLES  ಅಪಘಾತ : ಕೆನರಾ ಬ್ಯಾಂಕ್ ಕ್ಯಾಶಿಯರ್ ಗೆ ಗಂಭೀರ ಪೆಟ್ಟು.

ಈ ಸುದ್ದಿಗಳನ್ನೂ ಓದಿ.

ಶುಭಂ ಕೂಡ ಒಮ್ಮೆಸ್ಕಾನ್ ಮಾಡಿದ್ದು, ಎರಡನೇ ಕರೆಯ ನಡುವೆ ಲೋಡ್ ತೆಗೆದುಕೊಂಡು ತೆರಳಿದ್ದ ಲಾರಿ ಚಾಲಕ ಶಾಲೆಗೆ ಯಾವುದೇ ಸಿಮೆಂಟ್ ಬ್ಲಾಕ್ ಅವಶ್ಯಕತೆ ಇಲ್ಲವಂತೆ ಎಂದು ತಿಳಿಸಿರುವುದಾಗಿ ಕರೆ ಮಾಡಿ ತಿಳಿಸಿದ್ದಾನೆ. ಮಾಡಿ ತಿಳಿಸಿದ್ದಾನೆ. ಇದೇ ಸಂದರ್ಭದಲ್ಲಿ ಶುಭಂ ಅವರ ಖಾತೆಯಿಂದ 500 ರೂ. ಕಡಿತಗೊಂಡಿದ್ದು, ತಕ್ಷಣವೇ ತಮ್ಮಖಾತೆಯಲ್ಲಿದ್ದ ಸಂಪೂರ್ಣ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡು ಶುಭಂ ಚಾಣಾಕ್ಷತನ ಮೆರೆದಿದ್ದಾರೆ. ಬಳಿಕ ಘಟನೆಯ ಬಗ್ಗೆ ಸೈಬರ್ ಅಪರಾಧ ಠಾಣೆಗೆ ಮಾಹಿತಿ ನೀಡಿದ್ದು, ಆನ್ಸೆನ್ ದೂರು ಕೂಡ ದಾಖಲು ಮಾಡಲಾಗಿದೆ.

RELATED ARTICLES  ಇಂದು ಉತ್ತರಕನ್ನಡ ಜಿಲ್ಲೆಯಲ್ಲಿ 309 ಜನರಲ್ಲಿ ಪಾಸಿಟಿವ್..!