ಶಿರಸಿ: ಯುವಕನೋರ್ವ ಲಾರಿಯ ಹಿಂಬದಿಯ ಚಕ್ರಕ್ಕೆ ಸಿಲುಕಿ ತೀವ್ರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಗೆ ಕರೆದೊಯ್ಯುತ್ತಿರುವಾಗ ಸಾವು ಕಂಡ ಘಟನೆ ನಡೆದಿದೆ. ಕಾನಸೂರು ಸಮೀಪದ ಅರಶಿನಗೋಡಿನ ನಾಗರಾಜ (27) ಎಂಬಾತನೇ ಸಾವು ಕಂಡ ದುರ್ದೈವಿ ಯಾಗಿದ್ದಾನೆ. ಸೋಮವಾರ ಸಂಜೆ ಕಾನಸೂರಿನಿಂದ ಶಿರಸಿ ಗೆ ಬರುತ್ತಿರುವಾಗ ಮುಂದುಗಡೆಯಿದ್ದ ಕಾರೊಂದು ಏಕಾಏಕಿ ಬ್ರೇಕ್ ಹಾಕಿ ನಿಲ್ಲಿಸಿದ್ದರಿಂದ ಹಿಂದುಗಡೆ ಬರುತ್ತಿದ್ದ ನಾಗರಾಜ ತನ್ನ ಬೈಕನ ನಿಯಂತ್ರಣ ಸಿಗದೇ ಕಾರಿಗೆ ಗುದ್ದಿ ಚಲಿಸುತ್ತಿದ್ದ ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ.

RELATED ARTICLES  ಅಸ್ಥಿತ್ವಕ್ಕೆ ಬರಲಿದೆ ಪ್ರಾಥಮಿಕ ಶಿಕ್ಷಣ ಪರಿಷತ್ : ಸಚಿವ ಸುರೇಶಕುಮಾರ್

ಬೈಕ್ ಸವಾರ ನಾಗರಾಜ ನನ್ನು ಸ್ಥಳೀಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸುತ್ತಿರುವಾಗ ಮಾರ್ಗ ಮಧ್ಯೆ ಯುವಕ ಸಾವನ್ನು ಕಂಡಿದ್ದಾನೆ. ಈ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ ರಾಮಚಂದ್ರ ನಾಯಕ ಸ್ಥಳಪರಿಶೀಲಿಸಿದ್ದು ಪಿಎಸ್‌ಐ ರಾಜಕುಮಾರ್‌ ಉಕ್ಕಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES  ಡಾ.ವೀರೇಂದ್ರ ಹೆಗ್ಗಡೆಯವರಲ್ಲಿ ರೋಟರಿಯಿಂದ ಮನವಿ

ಈ ಸುದ್ದಿಗಳನ್ನೂ ಓದಿ.