ಕುಮಟಾ: ನ್ಯೂಜಿಲೆಂಡ್ ನ ಆಕ್ಲೆಂಡಿನಲ್ಲಿ ನಡೆದ ಕಾಮನ್ವೆಲ್ತ್ ಬೆಂಚ್ ಪ್ರೆಸ್ ಕ್ರೀಡಾಕೂಟದ 93 ಕೆಜಿ ಕ್ಯಾಟಗರಿಯ M1 ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನ ಗೆದ್ದು ಸಾಧನೆ ಮಾಡಿದ್ದಾರೆ ಕುಮಟಾದ ಹೆಮ್ಮೆಯ ಕ್ರೀಡಾಪಟುಗಳಾದ ಶ್ರೀ ವೆಂಕಟೇಶ ನಾರಾಯಣ ಪ್ರಭು. ಇವರ ಈ ಸಾಧನೆಗೆ ಕುಮಟಾದ ಸಮಸ್ತ ನಾಗರೀಕರು ಹಾಗೂ ಉತ್ತರಕನ್ನಡದ ಪ್ರಮುಖರು ಸಂತಸ ವ್ಯಕ್ತಪಡಿಸಿದ್ದಾರೆ.

ಸಾಲ ಮಾಡಿ ಪವರ್ ಲಿಫ್ಟಿಂಗ್ ಸಲಕರಣೆಗಳನ್ನು ಖರೀದಿಸಿ, ಕಠಿಣ ಪರಿಶ್ರಮ ಪಟ್ಟವರು ಪಟ್ಟಣದ ವೆಂಕಟೇಶ ಪ್ರಭು. ಈಚೆಗೆ ಕೇರಳದಲ್ಲಿ ನಡೆದ ರಾಷ್ಟ್ರಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆಯ 93 ಕೆ.ಜಿ. ವಿಭಾಗದಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಪದಕಗಳನ್ನು ಜಯಿಸಿ ಸಂಕಷ್ಟಗಳ ನಡುವೆ ಹೆಮ್ಮೆಯ ನಗು ಅರಳಿಸಿದ್ದರು.

RELATED ARTICLES  ಮುಖ್ಯಮಂತ್ರಿಯಾಗೋಕೆ ಸಂಕಲ್ಪ ಮಾಡಿದ ಕನಕಪುರ ಬಂಡೆ ಡಿ.ಕೆ.ಶಿವಕುಮಾರ್

ಈ ಸುದ್ದಿಗಳನ್ನೂ ಓದಿ.

40 ವರ್ಷದ ವೆಂಕಟೇಶ ಪ್ರಭು, ಸ್ಥಳೀಯ ಪುರಸಭೆಯಿಂದ ನಡೆಯುವ ಮುನ್ಸಿಪಲ್ ವ್ಯಾಯಾಮ ಶಾಲೆಯ ವಿದ್ಯಾರ್ಥಿ. ಕಾಲೇಜಿಗೆ ಹೋಗುವಾಗ ವಿಶ್ವವಿದ್ಯಾಲಯ ಮಟ್ಟದಲ್ಲಿ ಚಾಂಪಿಯನ್ ಆಗಿದ್ದವರು. ಓದು ಅರ್ಧಕ್ಕೆ ನಿಲ್ಲಿಸಿ ಜೀವನೋಪಾಯಕ್ಕೆ ಕಿರಾಣಿ ಅಂಗಡಿ ಇಟ್ಟುಕೊಂಡರು. ಸುಮಾರು 13 ವರ್ಷಗಳ ನಂತರ ಮತ್ತೆ ಪವರ್ ಲಿಫ್ಟಿಂಗ್‌ನತ್ತ ಮತ್ತೆ ಒಲವು ತೋರಿದರು. ರಾಜ್ಯಮಟ್ಟದ ಆರು ಸ್ಪರ್ಧೆಗಳಲ್ಲಿ ಚಿನ್ನ, ಬೆಳ್ಳಿ ಪದಕಗಳು, ‘ಸ್ಟ್ರಾಂಗ್ ಮ್ಯಾನ್’ ಬಿರುದು ಪಡೆದುಕೊಂಡರು. ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡಿದ್ದರು.

RELATED ARTICLES  ಇಹಲೋಕ ತ್ಯಜಿಸಿದ ಶತಾಯುಶಿ : ಮಹಾತಾಯಿ ರಮಾ ನಾಯ್ಕ ಇನ್ನಿಲ್ಲ