ಯಲ್ಲಾಪುರ : ಇತ್ತೀಚೆಗೆ ಕೋಟ್ಯಾಂತರ ರೂಪಾಯಿ ಹಣವನ್ನು ಒಯ್ಯುತ್ತಿರುವಾಗ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಅರಬೈಲ್ ಬಳಿ ಮದ್ಯರಾತ್ರಿಯಲ್ಲಿ ದರೋಡೆ ಮಾಡಿ ನಾಪತ್ತೆಯಾಗಿದ್ದ ಅಂತರಾಜ್ಯ ದರೋಡೆ ಕೊರರನ್ನು ಯಲ್ಲಾಪುರ ಪೋಲೀಸರು ಬಂಧಿಸಿ ಕಾರು, ಹಣ, ಮೋಬೈಲ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ಅಭಿನಂದನೆಗೆ ಪಾತ್ರರಾಗಿದ್ದಾರೆ.

ಅಕ್ಟೋಬರ್.೨ ರಂದು ೧.೩೦ ರ ಸುಮಾರಿಗೆ ಕಾರವಾರ-ಬಳ್ಳಾರಿ ರಾಷ್ಟ್ರೀಯ  ಹೆದ್ದಾರಿ ಅರಬೈಲ್ ಬಳಿ ಸ್ವೀಪ್ಟ್ ಕಾರನ್ನು ಕೆಎಲ್೧೧ಎಕೆ೦೦೦೩ ೭-೮ ಜನ ಆರೋಪಿಗಳು ಕಾರನ್ನು ಅಡ್ಡಗಟ್ಟಿ, ಬೆದರಿಸಿ ೨ ಲಕ್ಷ ಮೌಲ್ಯದ ಸ್ವಿಪ್ಟ್ ಕಾರು ಮತ್ತು ಅದರಲ್ಲಿದ್ದ ೨,೧೧,೮೬,೦೦೦ ರೂ. ಹಣವನ್ನು ಮತ್ತು ೧೦,೦೦೦ ರೂ. ಬೆಲೆಬಾಳುವ ಮೋಬೈಲ್‌ಅನ್ನು ದರೊಡೆ ಮಾಡಿಕೊಂಡು ಹೊಗಿದ್ದಾರೆಂದು ಅಕ್ಟೊಬರ್.೪ ರಂದು ಕೊಲ್ಲಾಪುರದ ಗಡಗ್ಲಾಂಜ್ ಕಾಳಬೈರಿ ರೋಡಿನ ನಿವಾಸಿ ನಿಲೇಶ ಪಾಂಡುರಂಗ ನಾಯ್ಕ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

RELATED ARTICLES  ಮನುಕುಲದ ಇತಿಹಾಸದಲ್ಲೇ ಮೊದಲ ಬಾರಿಗೆ ಸೂರ್ಯನ ಬಳಿಗೆ ನಾಸಾ ವಿಮಾನ!


ಈ ಪ್ರಕರಣದಲ್ಲಿ ಸೂಮಾರು ೨೦ ಕ್ಕು ಹೆಚ್ಚು ಅಂತರ ರಾಜ್ಯ ದರೋಡೆಕೊರರು ಬಾಗಿಯಾಗಿದ್ದಾರೆ ಎಂದು ಪೋಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಈ ತಂಡದ ಹಿಂದೆ ಪ್ರಭಾವಿ ದರೋಡೆಕೊರರ ಬಳಗ ಇರಬಹುದೆಂದು ಪೋಲೀಸರಿಗೆ ಸಂಶಯ ವ್ಯಕ್ತವಾಗಿದೆ. ಆರೋಪಿಗಳಾದ ಕೆರಳದ ಕಾಸರಗೊಡ್ ಕುಂಬಳದ ಶಿರಿಯಾ ಪುತಿಯಂಗಡಿಯ ಮಹಮದ್ ಕಬೀರ್ ಮೈನುದ್ದಿನ್ ಹಾಜಿ(೩೦), ಕೇರಳದ ಪಾಲಕ್ಕಾಡ್ ನಾನ್‌ಮಾರ್‌ನ ಆಯಲೂರ್ ಕೋಜಿಕೋಡಿಯ ಶುಭಾಷ್ ರಾಧಾಕೃಷ್ಣನ್ (೨೬), ಪಾಲಕ್ಕಾಡ್‌ನ ನೆಮ್ಮಾರ್ ಐಲೂರ್ ಕಯ್ಯಪ್ಪನಚೆರಿಯ ಅಪ್ಪು ವಿಜಯಕೃಷ್ಣನ್(೨೫) ಇವರನ್ನು ಬಂಧಿಸಿ ಅವರ ಬಳಿ ಇದ್ದ ಮಹಿಂದ್ರಾ ಮೊರೆಜೊ, ಮಾರುತಿ ಬ್ರೀಜಾ ಮತ್ತು ದರೋಡೆ ಮಾಡಿಕೊಂಡು ಹೋದ ಸ್ವೀಪ್ಟ್ ಕಾರುಗಳು ಹಾಗೂ ನಗದು ಹಣ ೯೮,೦೦೦ ಸೇರಿ ಒಟ್ಟು ೧೯,೯೮,೦೦೦ ಮೌಲ್ಯದ ಸ್ವತ್ತನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ.

RELATED ARTICLES  ಪೊಲೀಸ್ ದಾಳಿ : 25 ಸೈಕಲ್ 3 ಬೈಕ್ ಜಪ್ತಿ : ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ ಖತರ್ನಾಕ್ ಆಸಾಮಿ.


ಜಿಲ್ಲಾ ಪೋಲೀಸ್ ಅದೀಕ್ಷಕ ವಿಷ್ಣುವರ್ಧನ ಮತ್ತು ಶಿರಸಿಯ ಡಿ.ವೈ.ಎಸ್.ಪಿ. ರವಿ ನಾಯ್ಕ ನಿರ್ದೆಶನದಲ್ಲಿ ಯಲ್ಲಾಪುರ ಪಿ.ಐ ಸುರೇಶ ಯಳ್ಳೂರ್ ಇವರ ನೇತ್ರತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡದಲ್ಲಿ ಪಿ.ಎಸ್.ಐ ಗಳಾದ ಮಂಜುನಾಥ ಗೌಡರ್, ಅಮೀನ್ ಸಾಬ್ ಅತ್ತಾರ, ಉದಯ್ ಮತ್ತು ಸಿಬ್ಬಂದಿಗಳಾದ ಬಸವರಾಜ ಹಗರಿ, ಮಹಮದ್ ಶಫಿ, ದೀಪಕ್ ನಾಯ್ಕ, ಗಜಾನನ ನಾಯ್ಕ, ಡ್ಯಾನಿ ಫರ್ನಾಂಡಿಸ್, ರಾಜೇಶ ನಾಯಕ, ಪರಶುರಾಮ ಕಾಳೆ, ಪ್ರವೀಣ ಪೂಜಾರ್, ಚನ್ನಕೇಶವ, ಗಿರೀಶ, ನಂದೀಶ, ಸಕ್ರಪ್ಪ, ಶೇಷು, ವಿಜಯ, ಶೋಭಾ ನಾಯ್ಕ, ಸಿ.ಡಿ.ಆರ್ ಸೆಲ್ ವಿಭಾಗದ ಉದಯ ಮತ್ತು ರಮೇಶ, ಮಡಕೇರಿ ಠಾಣೆಯ ಯೋಗಿ ಇವರುಗಳು ಈ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಕಳೆದ ೧ ತಿಂಗಳ ಕಾಲ ಕಾರ್ಯಾಚರಣೆ ನಡೆಸಿ ಮೂವರನ್ನು ಹಿಡಿಯುವಲ್ಲಿ ಯಶಸ್ವೀಯಾಗಿದ್ದಾರೆ.