ಕುಮಟಾ : ಅಪ್ರಾಪ್ತ ಬಾಲಕನೊಂದಿಗೆ ಸಲಿಂಗ ಲೈಂಗಿಕ ಕ್ರಿಯೆ ಮಾಡಿದ ಆರೋಪಿಗೆ ಜಿಲ್ಲಾ ಸತ್ರ ನ್ಯಾಯಾಲಯವು 20 ವರ್ಷಗಳ ಕಠಿಣ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದೆ. ಕುಮಟಾ ಪಟ್ಟಣದ ವನ್ನಳ್ಳಿಯ ಅನ್ಸಾರಿ ಖಾಸಿಂ ಜಿಂಗೊ ಎಂಬಾತ ಶಿಕ್ಷೆಗೆ ಗುರಿಯಾದವ. ಈತ 2022ರ ಮಾರ್ಚ್ 15ರಂದು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ 6 ವರ್ಷದ ಬಾಲಕನನ್ನು ಚಾಕಲೇಟ್ ನೀಡುವುದಾಗಿ ಪುಸಲಾಯಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸಲಿಂಗ ಲೈಂಗಿಕ ಕ್ರಿಯೆ ನಡೆಸಿದ್ದ.
ಈ ಸಂಬಂಧ ನೊಂದ ಬಾಲಕನ ಪಾಲಕರು ಮಾರ್ಚ್ 16ರಂದು ಆರೋಪಿತನ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆ ಪ್ರಕಟಿಸಿದ್ದಾರೆ.
ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ.