ಯಲ್ಲಾಪುರ : ಕಂಟೇನರ್ ಡಿಕ್ಕಿಯಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಯಲ್ಲಾಪುರ ಪಟ್ಟಣದ ಹೊರವಲಯದ ಮಾಗೋಡ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಮಂಗಳವಾರ ನಡೆದಿದೆ. ಈ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಇಡಗುಂದಿ ಸಮೀಪದ ಬೆಟಗೇರಿ ದೋಣಗಾರ ಗ್ರಾಮದ ಕೃಷಿಕ 54 ವರ್ಷ ವಯಸ್ಸಿನ ನಾರಾಯಣ ಕೃಷ್ಣ ಭಟ್ಟ ಎಂದು ಗುರುತಿಸಲಾಗಿದೆ.

RELATED ARTICLES  ಯೋಧರ ಹತ್ಯೆ ಪ್ರತೀಕಾರಕ್ಕಾಗಿ ಆಗ್ರಹಿಸಿ ಕುಮಟಾದಲ್ಲಿ ಫೆ 16 ರಂದು ಮೆರವಣಿಗೆ ಮೂಲಕ ಮನವಿ ಸಲ್ಲಿಕೆ: ಗಣ್ಯರ ಮಾಹಿತಿ.

ತನ್ನ ಎಕ್ಸೆಲ್ ಲೂನಾವನ್ನು ಹೆದ್ದಾರಿ ಬದಿಗೆ ನಿಲ್ಲಿಸಿ, ಮೂತ್ರ ವಿಸರ್ಜನೆ ಮಾಡುತ್ತಿರುವಾಗ, ಯಲ್ಲಾಪುರ ಕಡೆಯಿಂದ ಅತಿವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದ ಕಂಟೇನರ್ ವಾಹನವು ಡಿಕ್ಕಿಯಾಗಿ ವ್ಯಕ್ತಿಯು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಂಟೇನರ್ ಚಾಲಕನು ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಕೆಲಸ ಮುಗಿಸಿ ಕೈ ಕಾಲು ತೊಳೆಯಲು ಬಂದವನನ್ನು ಹೊತ್ತೊಯ್ದ ಮೊಸಳೆ.