ಭಟ್ಕಳ : ಕನ್ನಡ ಸಾಹಿತ್ಯ ಪರಿಷತ್ ಹಾಗೂ ಭುವನೇಶ್ವರಿ ಕನ್ನಡ ಸಂಘದ ಸಹಯೋಗದಲ್ಲಿ ಮುರ್ಡೇಶ್ವರ ಮಂಜುನಾಥ ಅವರ ಹನಿಗವನಗಳ ಸಂಕಲನ ಹಾಗೂ ಲೀಲಾವೃತ ಪ್ರಬಂಧ ಸಂಕಲನಗಳ ಕೃತಿಗಳನ್ನು ಶಾಸಕ ಸುನೀಲ ನಾಯ್ಕ ಬಿಡುಗಡೆಗೊಳಿಸಿ ಶುಭಹಾರೈಸಿದರು. ಕೃತಿಗಳನ್ನು ಸಾಹಿತಿ ಶ್ರೀಧರ ಶೇಟ್ ಶಿರಾಲಿ ಪರಿಚಯಿಸಿದರು. ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಆಶಯ ನುಡಿಗಳನ್ನಾಡಿ ಭುವನೇಶ್ವರಿ ಕನ್ನಡ ಸಂಘ ಕನ್ನಡ ರಾಜ್ಯೋತ್ಸವವನ್ನು ಭಟ್ಕಳದ ಸಮಸ್ತ ನಾಗರಿಕರ ಹಬ್ಬವನ್ನಾಗಿಸಿ ರಾಜ್ಯೋತ್ಸವದ ಸಂಭ್ರಮವನ್ನು ಎಲ್ಲರ ಸಂಭ್ರಮವನ್ನಾಗಿಸಿದೆ. ಸಾಹಿತ್ಯ ಪರಿಷತ್ತಿನೊಂದಿಗೆ ಕೈಜೋಡಿಸಿ ಕೃತಿಗಳ ಲೋಕಾರ್ಪಣೆಗೆ ಸಹಕಾರ ನೀಡಿದುದಕ್ಕಾಗಿ ಸಾಹಿತ್ಯ ಪರಿಷತ್ ಪರವಾಗಿ ಅಭಿನಂದಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ರಮೇಶ ನಾಯ್ಕ, ಮಾಜಿ ಶಾಸಕ ಜೆ.ಡಿ.ನಾಯ್ಕ, ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ, ಅರ್ಬನ ಬ್ಯಾಂಕಿನ ನಿರ್ದೇಶಕ ಶ್ರೀಧರ ನಾಯ್ಕ,ಆಸರಕೇರಿ, ಪುರಸಭಾ ಸದಸ್ಯ ಶ್ರೀಕಾಂತ ನಾಯ್ಕ, ಜರ್ನಲಿಸ್ಟ ಯುನಿಯನ್ ಜಿಲ್ಲಾಧ್ಯಕ್ಷ ಮನಮೋಹನ ನಾಯ್ಕ, ವೆಂಕಟೇಶ ನಾಯ್ಕ ಆಸರಕೇರಿ,ಮಹೇಶ ನಾಯ್ಕ, ವಸಂತ ನಾಯ್ಕ, ಭಾಸ್ಕರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕ್ರತಿಕಾರ ಮುರ್ಡೇಶ್ವರ ಮಂಜುನಾಥ ಅವರನ್ನು ಸನ್ಮಾನಿಸಲಾಯಿತು.
Home Uttara Kannada ಸಾಹಿತ್ಯ ಪರಿಷತ್ ಹಾಗೂ ಭುವನೇಶ್ವರಿ ಕನ್ನಡ ಸಂಘದಿಂದ ಮುರ್ಡೆಶ್ವರ ಮಂಜುನಾಥ ಆವರ ಕೃತಿಗಳ ಲೋಕಾರ್ಪಣೆ.