ಯಲ್ಲಾಪುರ: ತಾಲೂಕಿನ ಮಾವಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 6 ಜನರು ಗಾಯಗೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ. ಘಟನೆಯ ಸ್ಥಳದಲ್ಲಿ ಕೆಲ ಕಾಲ ವಾಹನ ಸಂಚಾರ ಅಗತ್ಯವಾಗಿದ್ದು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರೆಂದು ವರದಿಯಾಗಿದೆ.
ಕಾರು ಚಾಲಕ ವಿಜಯಪುರದ ಸಚಿನ್ ಕಟ್ಟಿಮನಿ ಎಂಬಾತ ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಮುಂದೆ ಹೋಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಲು ಅತಿವೇಗ ಹಾಗೂ ನಿರ್ಲಕ್ಷ್ಯದ ಪರಿಣಾಮ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಮೂಲಗಳಿಂದ ತಿಳಿದಿದೆ .
ಈ ಸುದ್ದಿಗಳನ್ನೂ ಓದಿ.
- ಸೋಡಿಗದ್ದೆ ಶ್ರೀ ಮಹಾಸತಿ ಅಮ್ಮನವರ ಭಕ್ತಿಗೀತೆ ಅಲ್ಬಮ್ ಬಿಡುಗಡೆ
- ಅಂಜುಮನ್ ಕಾಲೇಜಿನಲ್ಲಿ MBA ವಿದ್ಯಾರ್ಥಿಗಳ ಪದವಿ ದಿನದ ಸಮಾರಂಭ
ಈ ಅಪಘಾತದಲ್ಲಿ ಕಾರು ಚಾಲಕ ಸಚಿನ್ ಜೊತೆಗಿದ್ದ ಅಜಯ್ ಕುಮಾರ್ ದೇಸಾಯಿ (29), ಸಾಗರ ಪಾಟೀಲ್ (28) ಎಂಬುವರು ಗಾಯಗೊಂಡಿದ್ದಾರೆ. ಮತ್ತೊಂದು ಕಾರಿನಲ್ಲಿದ್ದ ಶಬನಮ್ ಅಪ್ತಾಬ್ ಅಹ್ಮದ್ ಮುಲ್ಲಾ (27 ವರ್ಷ) ಮಹ್ಮದ್ ಸೈಫ್ ಪಠಾಣ (7) ಮುರ್ತುಜಾ ಖಾನ್ ಖಾಶೀಂ ಖಾನ್ ಇವರಿಗೆ ಸಣ್ಣಪುಟ್ಟ ಗಾಯವಾಗಿದೆ. ಘಟನೆಯಲ್ಲಿ ಎರಡೂ ಕಾರುಗಳು ಜಖಂಗೊಂಡಿವೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.