ಕಾರವಾರ : ಉತ್ತರ ಕನ್ನಡದಲ್ಲಿ ಅಪಘಾತ ಸರಣಿ ಮುಂದುವರೆದಿದ್ದು, ಕಾರವಾರದಲ್ಲಿ ನಡೆದ ಅಪಘಾತ ಒಂದರಲ್ಲಿ ಕುಮಟಾದ ಛಾಯಾಚಿತ್ರಗ್ರಾಹಕನೊಬ್ಬ ಕೊನೆ ಉಸಿರೆಳೆದ ಘಟನೆ ವರದಿಯಾಗಿದೆ. ತಾಲೂಕಿನ ಅಮದಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಬೈಕ್ ಮತ್ತು ಟೆಂಪೋ ನಡುವಿನ ಅಪಘಾತದಲ್ಲಿ, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.

ಬೈಕ್‌ನಲ್ಲಿ ಸಾಗುತ್ತಿದ್ದ ಮಹಾಬಲೇಶ್ವರ ತಿರುವಿನಲ್ಲಿ ಬೈಕ್ ತಿರುಗಿಸುವಾಗ ದುರ್ಘಟನೆ ನಡೆದಿದೆ. ಕುಮಟಾದಲ್ಲಿ ಫೊಟೊಗ್ರಾಫರ್ ಆಗಿರುವ ಮಹಾಬಲೇಶ್ವರ ಅಂಬಿಗ ಮೃತಪಟ್ಟ ದುರ್ದೈವಿಯಾಗಿದ್ದಾನೆ.

RELATED ARTICLES  ಮಾಂಗಲ್ಯ ಕದ್ದವನು ಪೊಲೀಸರ ಬಲೆಗೆ..!

ಬೈಕ್‌ನ ಹಿಂದೆ ಬರುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣಕ್ಕೆ ಸಿಗದೆ ಮುಂದೆ ಮಹಾಬಲೇಶ್ವರ ಅವರ ಬೈಕ್‌ಗೆ ಡಿಕ್ಕಿಯಾದ ರಭಸಕ್ಕೆ ಬೈಕ್‌ನಲ್ಲಿದ್ದ ಮಹಾಬಲೇಶ್ವರ ಸಿನಿಮಿಯ ರೀತಿಯಲ್ಲಿ ಬೈಕ್ ಸಮೇತ ಹಾರಿ ಎದುರು ಚಲಿಸುತ್ತಿದ್ದ ಕಾರಿಗೆ ಬಡಿದು ರಸ್ತೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮಹಾಬಲೇಶ್ವರ, ಕ್ರಿಮ್ಸ್ ಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

RELATED ARTICLES  ರಾಷ್ಟ್ರೀಯ ಕ್ರೀಡಾ ದಿನದಂದು ಕ್ರೀಡಾ ಸಾಧಕರಿಗೆ ಸನ್ಮಾನ.

ಸುದ್ದಿಗಳನ್ನು ಓದಿ.

ಇದೇ ಮಾರ್ಗದಲ್ಲಿ ಸಾಗುತ್ತಿದ್ದ ಶಾಸಕಿ ರೂಪಾಲಿ ನಾಯ್ಕ ಸ್ಥಳದಲ್ಲೇ ಕೆಲ ಕಾಲ ನಿಂತು ಆಸ್ಪತ್ರೆಗೆ ಕರೆ ಮಾಡುವಲ್ಲಿ ಸಹಕರಿಸಿದರು. ಆದರೆ ಅಂಬ್ಯುಲೆನ್ಸ್ ಸ್ಥಳಕ್ಕೆ ಬರುವುದು ವಿಳಂಬವಾದ ಕಾರಣ ಶಾಸಕಿ ಐಆರ್‌ಬಿ ವಾಹನವನ್ನ ತುರ್ತಾಗಿ ಕರೆಯಿಸಿ ಸ್ಥಳಕ್ಕೆ ಕರೆಯಿಸಿ, ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದ್ದಾರೆ.