ಗೋಕರ್ಣ: ಪ್ರವಾಸಕ್ಕೆ ಬಂದಿದ್ದ ವಯಸ್ಸಾದ ಅಜ್ಜಿಯೊಬ್ಬಳು ಬಸ್‌ನಲ್ಲಿ ಪ್ರವಾಸಿಗರು ಕುಳಿತುಕೊಳ್ಳುವ ಸಿಟ್ ನಲ್ಲಿಯೇ ಮೃತಪಟ್ಟಿರುವುದು ಬುಧವಾರ ಇಲ್ಲಿನ ಬಸ್ ನಿಲ್ದಾಣದಲ್ಲಿ ಕಂಡು ಬಂದಿದೆ. ಗುಜರಾತ್ ರಾಜ್ಯದ ಈರಾಬಾಯಿ ನರಸಿಂಗ್ (90) ಮೃತ ಪಟ್ಟ ವೃದ್ದೆಯಾಗಿದ್ದು, ಗುಜರಾತ್‌ದಿಂದ 40 ಜನರ ತಂಡ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿ ಬುಧವಾರ ಬೆಳಿಗ್ಗೆ ಗೋಕರ್ಣ ತಲುಪಿದಾಗ ಕುಳಿತ ಸೀಟ್‌ನಲ್ಲಿಯೇ
ವೃದ್ಧೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈಕೆಗೆ ಅನಾರೋಗ್ಯ ಎನ್ನಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗೋಕರ್ಣಕ್ಕೆ ಬಂದಿದ್ದರು ಎನ್ನಲಾಗಿದೆ. ಸಂಬಂಧಿಕರು ಸರ್ಕಾರಿ ಆಸ್ಪತ್ರೆಗೆ ವಿಷಯ ತಿಳಿಸಿದಾಗ ವೈದ್ಯರು ಪೊಲೀಸ್ ಜೊತೆ ಬಸ್ ನಿಲ್ದಾಣಕ್ಕೆ ಆಗಮಿಸಿ ಉಸಿರಾಟ ತೊಂದರೆಯಿಂದ ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ.
ಈ ಬಗ್ಗೆ ವೃದ್ಧೆಯ ಮಗನಿಗೆ ವಿಷಯ ತಿಳಿಸಿದ್ದು, ಅಂತ್ಯಕ್ರಿಯೆಯನ್ನು ಕಾರವಾರದಲ್ಲಿಯೇ ನಡೆಸುವುದಾಗಿ ಸಂಬಂಧಿಕರು ತಿಳಿಸಿದ್ದಾರೆನ್ನಲಾಗಿದೆ.