ಹೊನ್ನಾವರ : ಡಿಸೆಂಬರ್ ಜನವರಿ ಪ್ರಾರಂಭವಾಯಿತು ಎಂದರೆ ಶಬರಿಮಲೆ ಯಾತ್ಯಾರ್ತಿಗಳ ದಂಡೆ ಕಾಣಸಿಗುತ್ತದೆ. ಶಬರಿಮಲೆ ಅಯ್ಯಪ್ಪನ ಕ್ಷೇತ್ರಕ್ಕೆ ತೆರಳಲು ಪಾದಯಾತ್ರೆಗಳ ಮೂಲಕ ಅನೇಕ ಜನರು ಸಾಗುವುದನ್ನು ಕಾಣುತ್ತೇವೆ ಆದರೆ ಇಲ್ಲೊಂದು ಅಚ್ಚರಿಯ ಘಟನೆ ನಡೆದಿದ್ದು ಇದನ್ನು ವಿಶೇಷವಾಗಿ ಜನ ಗುರುತಿಸುತ್ತಿದ್ದಾರೆ. ಇದೀಗ ಪಾದಯಾತ್ರೆ ಹೊರಟಿದ್ದ ಮಾಲಾಧಾರಿಗಳೊಂದಿಗೆ ನಾಯಿಯೊಂದು ಹೆಜ್ಜೆ ಹಾಕುವ ಮೂಲಕ ಅಚ್ಚರಿ ಮೂಡಿಸಿದೆ.

ಧಾರವಾಡದ ಮಂಗಳಗಟ್ಟಿಯಿಂದ ಶಬರಿಮಲೆಗೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಮಾಲಾಧಾರಿಗಳಿಗೆ ಧಾರವಾಡದ ನರೇಂದ್ರ ಟೋಲ್ ಬಳಿ ನಾಯಿಯೊಂದು ಸಿಕ್ಕಿದೆ. ಪ್ರಾರಂಭದಲ್ಲಿ ಈ ಬಗ್ಗೆ ಯಾವೊಬ್ಬ ಮಾಲಾಧಾರಿಗಳೂ ಅಷ್ಟೊಂದು ಗಮನ ನೀಡಿರಲಿಲ್ಲ. ಬಹುದೂರದವರೆಗೂ ಈ ಶ್ವಾನ ಮಾಲಾಧಾರಿಗಳೊಂದಿಗೆ ಸಾಗಿ ಬಂದಿದ್ದು, ಆಹಾರ ನೀಡಿ ಪೋಷಿಸಿದ್ದಾರೆ. ಇದೀಗ 200 ಕಿ.ಮೀ. ಕ್ರಮಿಸಿ ಹೊನ್ನಾವರ ತಲುಪಿರುವ ಮಾಲಾಧಾರಿಗಳೊಂದಿಗೇ ನಾಯಿ ದಣಿಯದೆ ಹೆಜ್ಜೆ ಹಾಕುತ್ತಿದೆ. ದೇವರ ಸಂಕಲ್ಪವೇ ಈ ಎಲ್ಲಾ ಕ್ರಿಯೆಗಳಿಗೆ ಕಾರಣ ಎನ್ನುತ್ತಿದ್ದಾರೆ ಅನೇಕ ಭಕ್ತಾದಿಗಳು.

RELATED ARTICLES  ಕೊಂಕಣದ ಅಂಗಳದಲ್ಲಿ ಸಾಫ್ಟ್ ಲ್ಯಾಂಡ್ ಮಾಡಿದ ಇಸ್ರೋ : ಕಾರ್ಯಾಗಾರದಲ್ಲಿ ಪಾಲ್ಗೊಂಡು ಪುಳಕಿತರಾದ ಪ್ರೌಢಶಾಲಾ ವಿದ್ಯಾರ್ಥಿಗಳು

ಇದನ್ನ ಕಂಡು ಮಾಲಾಧಾರಿಗಳೂ ಅಚ್ಚರಿಗೊಂಡಿದ್ದಾರೆ. 1100 ಕಿ.ಮೀ. ದೂರದ ಕೇರಳದ ಶಬರಿಮಲೆಗೆ ತೆರಳುತ್ತಿರುವ ಭಕ್ತರ ತಂಡವೀಗ ಹೊನ್ನಾವರ ಕಾಸರಕೋಡ ಹಿರೇಮಠದ ಶ್ರೀಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಮುಂದೆ ಪಾದಯಾತ್ರೆ ಆರಂಭಿಸಿದ್ದಾರೆ.

RELATED ARTICLES  ಉಚಿತ ಶಸ್ತ್ರ ಚಿಕಿತ್ಸೆಯ ಸೌಲಭ್ಯ ಪಡೆಯಲು ಲಾಯನ್ಸ್ ಹ್ಯುಮೆನಿಟೇರಿಯನ್ ಸರ್ವಿಸ್ ಟ್ರಸ್ಟ್ ಅಧ್ಯಕ್ಷರ ಕರೆ

ವೃತಧಾರಿಗಳ ತಂಡ ವಿಶ್ರಾಂತಿ ಪಡೆಯುವ ಸಂದರ್ಭ ನಾಯಿಯೂ ವಿಶ್ರಾಂತಿ ಪಡೆಯುತ್ತಿದ್ದು, ಮುಂಜಾನೆಯೂ ಬೇಗ ಎದ್ದು ಎಲ್ಲರೊಂದಿಗೆ ಹೆಜ್ಜೆ ಹಾಕುತ್ತದೆ. ಮಾಲಾಧಾರಿಗಳೊಂದಿಗೆ ಆಟವಾಡುವುದರ ಜೊತೆಗೆ
ಅವರ ವಸ್ತುಗಳನ್ನು ಕಾಯುತ್ತಿದೆ. ಇದು ಅಯ್ಯಪ್ಪ ಸ್ವಾಮಿಯ ಲೀಲೆ ಎನ್ನುತ್ತಾರೆ ಅಯ್ಯಪ್ಪ ವೃತಧಾರಿಗಳು.