ಕುಮಟಾ – ಜ್ಞಾನ ಮನುಷ್ಯನನ್ನು ಅತೀಎತ್ತರಕ್ಕೆ ಕೊಂಡೊಯ್ಯುತ್ತದೆ. ಅಂತಹ ಅಪಾರವಾದ ಜ್ಞಾನ ಸಂಪಾದನೆಯ ಮೂಲಕ ಇಂದಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕೆಂದು ಮೂರೂರು ವಿದ್ಯಾನಿಕೇತನ ಸಂಸ್ಥೆಯ ಕಾರ್ಯಧ್ಯಕ್ಷರಾದ ಶ್ರೀ ಆರ್. ಜಿ ಭಟ್ಟ ನುಡಿದರು. ಅವರು ಪ್ರಗತಿ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂತರ್ ಶಾಲಾ ಮಟ್ಟದ ಸ್ಪರ್ಧಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಪರ್ಧೆಗೆ ಸಾಕಷ್ಟು ಸಿದ್ಧತೆ ಬೇಕು. ಪರಿಶ್ರಮವಿರಬೇಕು ಉತ್ತಮವಾದ ಕೌಶಲ್ಯದಿಂದ ಪಡೆದ ಜ್ಞಾನವನ್ನು ಇಂತಹ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸುವಂತೆ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಜಿ ಆರ್ ಉಗ್ರು ಅವರು, ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಇದು ಉತ್ತಮವಾದ ವೇದಿಕೆ. ಇಂತಹ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಸ್ಪರ್ಧೆ ನೀಡುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ವಿದ್ಯಾನಿಕೇತನ ಸಂಸ್ಥೆಯ ಶಿಕ್ಷಣ ವಿಭಾಗದ ಸಂಚಾಲಕರಾದ ಶ್ರೀ ಟಿ.ಆರ್ ಜೋಶಿ, ಸದಸ್ಯರಾದ ಶ್ರೀ ಎಸ್ ವಿ. ಹೆಗಡೆ ಬದ್ರನ್ ಪ್ರಾಚಾರ್ಯರದ ಶ್ರೀ ಜಿ. ಎಂ ಭಟ್ಟ. ಮುಖ್ಯೋಪಾಧ್ಯಾಯರಾದ ಶ್ರೀ ವಿವೇಕ್ ಆಚಾರಿ. ಕಾರ್ಯಕ್ರಮ ಸಂಚಾಲಕ ಶಿಕ್ಷಕರಾದ ಶ್ರೀ ಮನೋಹರ ಹರಿಕಂತ್ರ ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಶಾಲೆಗಳಿಂದ ಶಿಕ್ಷಕರು ವಿದ್ಯಾರ್ಥಿಗಳು ಆಗಮಿಸಿ, ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಸ್ಪರ್ಧೆ ನೀಡಿದರು.
ಭಾಷಣ ಸ್ಪರ್ಧೆಯಲ್ಲಿ ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕು.ನೇಹಾ ಆರ್. ಭಟ್ಟ ಪ್ರಥಮ, ಸಿ.ವಿ.ಎಸ್.ಕೆ.ಯ ಕು.ಭೂಮಿಕಾ ಭಟ್ಟ ದ್ವಿತೀಯ, ಗೋಕರ್ಣದ ಸಾರ್ವಭೌಮ ಗುರುಕುಲದ ಕು. ತೇಜಾ ಅವಧಾನಿ ತೃತೀಯ ಹಾಗೂ ಭಾವಗೀತೆ ಸ್ಪರ್ಧೆಯಲ್ಲಿ ಧಾರೆಶ್ವರದ ದಿನಕರ ಆಂಗ್ಲ ಮಾಧ್ಯಮ ಶಾಲೆ ಕು.ಅನನ್ಯಾ ಎಸ್.ಭಟ್ಟ ಪ್ರಥಮ, ಸಿ.ವಿ.ಎಸ್.ಕೆ.ಯ ಕು.ಸೃಜನ ಡಿ. ನಾಯ್ಕ ದ್ವಿತೀಯ, ಗುರುಕುಲದ ಗುರುಕುಲದ ಕು.ಶ್ರೀರಕ್ಷಾ ಎಮ್. ತೃತೀಯ ಹಾಗೂ ಚಿತ್ರಕಲೆಯಲ್ಲಿ ಸಿ.ವಿ.ಎಸ್.ಕೆ.ಯ ಕು.ಪಾವನಿ ಎಸ್.ನಾಯ್ಕ ಪ್ರಥಮ, ನೆಲ್ಲಿಕೇರಿಯ ಪಬ್ಲಿಕ್ ಶಾಲೆಯ ಕು.ನಿಯತಿ ಆರ್. ನಾಯಕ ದ್ವಿತೀಯ, ಸಾರ್ವಭೌಮ ಗುರುಕುಲದ ಕು.ದೃತಿ ಹೊಸಮನೆ ತೃತೀಯ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ನಿರ್ಮಲ ಕಾನ್ವೆಂಟಿನ ಕು.ಸಮರ್ಥ ಶೇಟ್ ಹಾಗೂ ಕು.ಶ್ರೀಪದ್ಮ ಕುಸಲೇಕರ ಪ್ರಥಮ ಹಾಗೂ ಸಿ.ವಿ.ಎಸ್.ಕೆ.ಯ ಕು.ರಾಹುಲ ಭಟ್ಟ ಮತ್ತು ಕು.ಸ್ನೇಹಾ ನಾಯ್ಕ ದ್ವಿತೀಯ ಸ್ಥಾನ ಪಡೆದಿರುತ್ತಾರೆ.