ಗೋಕರ್ಣ : ಸದಾ ಒಂದಿಲ್ಲೊಂದು ವಿಷಯಗಳಿಂದ ಗೋಕರ್ಣದ ಮಹಾಬಲೇಶ್ವರನ ಸನ್ನಿಧಾನ ಇದೀಗ ಸುದ್ದಿಯಾಗುತ್ತಿದೆ. ಹೊಸ ಹೊಸ ವಿವಾದಗಳು ಹುಟ್ಟಿಕೊಳ್ಳುತ್ತಿದ್ದು ಇದರಿಂದ ಪ್ರವಾಸಕ್ಕೆ ಬರುವ ಹಾಗೂ ಇತರ ಭಕ್ತಾದಿಗಳಿಗೆ ಗೊಂದಲದ ವಾತಾವರಣ ಉಂಟಾಗುತ್ತಿದೆ ಎನ್ನಲಾಗಿದೆ. ಇದೀಗ ಮಹಾಬಲೇಶ್ವರ ದೇವಾಲಯದಲ್ಲಿ ನಂದಿಮಂಟಪದಲ್ಲಿ ತೀರ್ಥ, ಪ್ರಸಾದವನ್ನು ನೀಡಬಾರದು ಎಂದು ಪಟ್ಟು ಹಿಡಿದು ತಡೆದ ಪರಿಣಾಮ ಕೆಲ ಕಾಲ ಉದ್ವಿಘ್ನ ಪರಿಸ್ಥಿ ನಿರ್ಮಾಣವಾದ ಘಟನೆ ನಡೆದಿದೆ ಎನ್ನಲಾಗಿದೆ. ಏಕಾಏಕಿ ಆದ ಗದ್ದಲದಿಂದ ಭಕ್ತರು ಕಂಗಾಲಾಗಿದ್ದರು. ನಂತರ ಪೊಲೀಸರು ಆಗಮಿಸಿ ಹತೋಟಿಗೆ ತಂದರು.
ಏನಿದು ಘಟನೆ..?
ಇಲ್ಲಿನ ಮಹಾಬಲೇಶ್ವರ ದೇವಾಲಯದ ನಂದಿ ಮಂಟಪದಲ್ಲಿ ತೀರ್ಥ ನೀಡುವ ಪದ್ಧತಿ ಈ ಮೊದಲಿನಿಂದಲೂ ನಡೆದುಕೊಂಡು ಬಂದಿದ್ದು, ಇಲ್ಲಿ ಕಾರ್ಯನಿರ್ವಹಿಸುವವರು ದೇವಾಲಯದ ಸ್ಪರ್ಶ ದರ್ಶನ ಮಗಿದ ಬಳಿಕ ಗರ್ಭಗುಡಿ ಸ್ವಚ್ಛಗೊಳಿಸಿ ಮಹಾಪೂಜೆಗೆ ತಯಾರಿ ಮಾಡಿಕೊಡುವ ಕಾರ್ಯವನ್ನು ಮಾಡುತ್ತಿದ್ದು, ಇಲ್ಲಿ ಇವರಿಗೆ ಭಕ್ತರು ನೀಡುವ ದಕ್ಷಿಣಿಯೇ ಸಂಭಾವನೆಯಾಗಿದೆ.
ಆದರೆ ಮಂದಿರದ ಸಿಬ್ಬಂದಿಯೇ ಇರಲಿ ಅರ್ಚಕರು ಬೇಡ ಎಂದು ಕೆಲವರು ವಿರೋಧಿಸಿದ್ದರು. ಅಲ್ಲದೇ ನಮಗೂ ಹಕ್ಕು ಇದೆ ನಮಗೆ ಅಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಿ ಎಂದು ಹೇಳಿದರು. ಮುಂಜಾನೆಯಿಂದ ನಾಲ್ಕು ತಾಸಿಗೂ ಅಧಿಕಾಲ ವಾದವಿವಾದ ನಡೆಯಿತು ಎನ್ನಲಾಗಿದೆ.
ಈ ಸುದ್ದಿಗಳನ್ನೂ ಓದಿ.
ನಂತರ ಮಂದಿರದ ಮೇಲುಸ್ತುವಾರಿ ಸಮಿತಿ ಕಾರ್ಯದರ್ಶಿ ಹಾಗೂ ಕುಮಟಾ ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ್ ಆಗಮಿಸಿ ಎರಡು ಗುಂಪಿನ ಸದಸ್ಯರನ್ನು ಕರೆಸಿ ಮಾತುಕತೆ ನಡೆಸಿ ಈ ವಿಷಯವಾಗಿ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಅಲ್ಲಿವರೆಗೆ ಗೊಂದಲ ಮಾಡದಂತೆ ಸೂಚನೆ ನೀಡಿದರು ಎನ್ನಲಾಗಿದೆ.