ಹೊನ್ನಾವರ : ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆ ಕವಲಕ್ಕಿಯಲ್ಲಿ ಹೊನ್ನಾವರದ ದಂತ ವೈದ್ಯರು ಹಾಗೂ ಲಯನ್ಸ್ ಕ್ಲಬ್ ಸದಸ್ಯರಾದ ಶ್ರೀ ನಾಗರಾಜ ಭೋಸ್ಕಿ ಮತ್ತು ಸೀಮಾ ಯರಗುಡ್ಡಿ ಇವರಿಂದ ದಂತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಉಮೇಶ ಹೆಗಡೆ, ಅಬ್ಳಿಯವರು, ಲಯನ್ ಕ್ಲಬ್ ಅಧ್ಯಕ್ಷರಾದ ಲಯನ್ ಕೆಸಿವರ್ಗಿಸ್ ಹಾಗೂ ಲಯನ್ ನಾಗರಾಜ ಭೋಸ್ಕಿ, ಲಯನ್ ಡಿ.ಡಿ. ಮಡಿವಾಳ, ಲಯನ್ ಶಂಕರ್ ನಾಯ್ಕ , ಲಯನ್ ಸಂತೋಷ್ ನಾಯ್ಕ, ಲಯನ್ ಶ್ರೀಕಾಂತ ಹೆಗಡೆಕರ್ ರವರು ಉಪಸ್ಥಿತರಿದ್ದರು.
ವೈದ್ಯರಾದ ನಾಗರಾಜ ಭೋಸ್ಕಿ ರವರು ಮಾತನಾಡಿ ಹಲ್ಲಿನ ಆರೋಗ್ಯದ ಮಹತ್ವವನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿ ಕೊಟ್ಟರು. ಹಾಗೂ ಅಧ್ಯಕ್ಷರಾದ ಶ್ರೀ ಕೆ.ಸಿ ವರ್ಗಿಸ್ ರವರು ಮಾತನಾಡಿ ಶಾಲೆಯ ಉತ್ತಮ ವಾತಾವರಣವನ್ನು ಮತ್ತು ವಿದ್ಯಾರ್ಥಿಗಳ ಶಿಸ್ತನ್ನು ಶ್ಲಾಘಿಸಿದರು.