ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಡಿ.5 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಆಗ್ನೇಯ ಬಂಗಾಳ ಕೊಲ್ಲಿ ಸಮುದ್ರದಲ್ಲಿ ಚಂಡಮಾರುತ ಲಕ್ಷಣಗಳು ಗೋಚರಿಸಿದ್ದು, ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

RELATED ARTICLES  ಆ.6 ಭಾನುವಾರ ಬೆಳಿಗ್ಗೆ 9.30 ರಿಂದ ಸಾಯಂಕಾಲ 5.30 ರವರೆಗೆ ಬೃಹತ್ ಉದ್ಯೋಗ ಮೇಳ.

ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಡಿಸೆಂಬರ್ 5ರ ವರೆಗೆ ಇದೇ ತುಂತುರು ಮಳೆ ಮುಂದುವರಿಯಲಿದೆ. ಡಿಸೆಂಬರ್ 4ರಂದು ದಕ್ಷಿಣ ಅಂಡಮಾನ್ನಿಂದ ಚಂಡಮಾರುತ ಪರಿಚಲನೆ ಹೊರಹೊಮ್ಮುವ ಸಾಧ್ಯತೆ ಇದೆ. ಇದರ ಪರಿಣಾಮ ಅಗ್ನೇಯ ಬಂಗಾಳ ಕೊಲ್ಲಿ ಹಾಗೂ ಅಂಡಮಾನ್ ಸಮುದ್ರ ತೀರಕ್ಕೆ ತಟ್ಟಲಿದೆ. ಡಿಸೆಂಬರ್ 8ರ ವೇಳೆಗೆ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

RELATED ARTICLES  ಶಿಕ್ಷಕರು ಬೇಕಾಗಿದ್ದಾರೆ.