ದಿನಗಳು ಕಳೆದಂತೆ ನಮ್ಮ ಜೀವನ ಕ್ರಮ ಬದಲಾಗುತ್ತಿದೆ. ಧಾವಂತದ ಜೀವನದಿಂದ ಆಹಾರ ಶೈಲಿಯೂ ಬದಲಾಗುತ್ತಿದೆ. ಹಿಂದಿನ ಕಾಲದಲ್ಲಿ ಶಾರೀರಿಕ ಶ್ರಮ ಹೆಚ್ಚಾಗಿತ್ತು. ತಿಂದ ಅಹಾರವನ್ನು ಕರಗಿಸಲು ಬೇಕಾದಷ್ಟು ಕೆಲಸಮಾಡುತ್ತಿದ್ದರು. ಕಂಪ್ಯೂಟರ್ ಯುಗದಲ್ಲಿ ನಾವು ತಿಂದ ಆಹಾರವನ್ನು ಕರಗಿಸಲೂ ಸಮಯ ದೊರೆಯುತ್ತಿಲ್ಲ. ಈಗೆಲ್ಲಿ ನೋಡಿದರೂ ‘ಜಂಕ್ ಫುಡ್’ ‘ ಫಾಸ್ಟ್ ಫುಡ್” ಗಳದ್ದೇ ಕಾರುಬಾರು. ಇಂತಹ ಮಾಡ್ರನ್ ಫುಡ್ ಗಳಲ್ಲಿ ಕೊಬ್ಬಿನಂಶ ಹೆಚ್ಚಾಗಿರುವುದರಿಂದ,ದೇಹವು ಈ ಕೊಬ್ಬನ್ನು ಕರಗಿಸಲಾಗದೆ ನಮ್ಮ ಹೊಟ್ಟೆಯ ಸುತ್ತಲೂ ಶೇಖರಣೆಗೊಳ್ಳುತ್ತಿದೆ. ಸ್ಥೂಲಕಾಯದ ಸಮಸ್ಯೆ ಹೆಚ್ಚುತ್ತಿದೆ. ದೇಹ ನೋಡಲು ವಿಕಾರವಾಗುತ್ತಿದೆ. ಕೊಬ್ಬನ್ನು ಕರಗಿಸಲು ‘ಜಿಮ್’ ಗೆ ಹೋಗಿ ಹಲವು ತರದ ವ್ಯಾಯಾಮಗಳನ್ನು ಮಾಡುವುದು ,ಬೆಳಿಗ್ಗೆ ವಾಕಿಂಗ್ ಮಾಡುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ.

RELATED ARTICLES  ವಾರಕ್ಕೊಮ್ಮೆ ಗ್ರಿಲ್ಡ್ ಚಿಕನ್, ರೋಸ್ಟೆಡ್ ಪಿಶ್ ತಿನ್ನುವವರಿಗೊಂದು ಆಘಾತಕಾರಿ ಸುದ್ದಿ.!

ಇವ್ಯಾವುದರ ಗೊಡವೆಯೂ ಇಲ್ಲದೆ ಕಡಿಮೆ ಖರ್ಚಿನಲ್ಲಿ,ಮನೆಯಲ್ಲೇ ತಯಾರಿಸಬಹುದಾದ ಒಂದು ‘ಜ್ಯೂಸ್’ಕುಡಿಯುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಹೊಟ್ಟೆಯ ಸುತ್ತಲೂ ಇರುವ ಕೊಬ್ಬನ್ನು ಕರಗಿಸಬಹುದು.ಅದು ಹೇಗೆಂದರೆ…

ಒಂದು ಚಮಚ ಕಾಮ ಕಸ್ತೂರಿ(ಸಬ್ಜಾ) ಬೀಜಗಳನ್ನು ಒಂದು ಲೋಟ ನೀರಿನಲ್ಲಿ ರಾತ್ರಿ ನೆನೆಹಾಕಿ. ಬೆಳಿಗ್ಗೆ ಎದ್ದು ನೋಡಿದಾಗ ಬೀಜಗಳು ಉಬ್ಬಿ ನೀರು ಲೋಳೆಯಂತಾಗಿರುತ್ತದೆ. ಇದಕ್ಕೆ ಅರ್ಧಹೋಳು ನಿಂಬೆ ಹಣ್ಣಿನ ರಸ ಸೇರಿಸಿ ಚೆನ್ನಾಗಿ ಕದಡಿ ಕುಡಿಯಬೇಕು. ಹೀಗೆ ಮಾಡುವುದರಿಂದ ಹೊಟ್ಟೆಯ ಸುತ್ತಲೂ ಸೇರಿರುವ ಕೊಬ್ಬು ಕೆಲವೇ ದಿನಗಳಲ್ಲಿ ಕರಗಿ ನಿಮ್ಮ ದೇಹ ಸಪೂರವಾಗುತ್ತದೆ. ಈ ನೀರು ಆಂಟಿಬಯಾಟಿಕ್ (Anti biotic) ಗುಣಗಳನ್ನು ಹೊಂದಿರುವುದರಿಂದ ಬ್ಯಾಕ್ಟೀರಿಯಾ ಸಂಬಂಧಿತ ಸಮಸ್ಯೆಗಳು ದೂರವಾಗುತ್ತವೆ. ಶರೀರದಲ್ಲಿರುವ ಮಲಿನ ಪದಾರ್ಥಗಳು ಹೊರದೂಡಲ್ಪಡುತ್ತವೆ. ದಾಹವನ್ನು ಕಡಿಮೆ ಮಾಡುತ್ತದೆ.ಟೈಪ್ -2 ಡಯಾಬಿಟೀಸ್ ಹತೋಟಿಯಲ್ಲಿರುತ್ತದೆ. ಫೈಬರ್,ಫೋಲಿಕ್ ಆಸಿಡ್ ,ವಿಟಮಿನ್ ಇ ಹೇರಳವಾಗಿರುವುದರಿಂದ ಮಹಿಳೆಯರಿಗೆ ಹೆಚ್ಚು ಉಪಯೋಗಕಾರಿ. ಇನ್ನೇಕೆ ತಡಮಾಡುತ್ತೀರಿ. ಇಂದಿನಿಂದಲೇ ಈ ‘ಜ್ಯೂಸ್” ಕುಡಿಯುವುದನ್ನು ಪ್ರಾರಂಭಿಸಿ.ತೆಳ್ಳನೆಯ ದೇಹ ನಿಮ್ಮದಾಗಿಸಿಕೊಳ್ಳಿ.

RELATED ARTICLES  ಪರ್ಫ್ಯೂಮ್ ನಿಮ್ಮ ಜೀವಕ್ಕೇ ಕುತ್ತು ತಂದೀತು ಜೋಕೆ!