ಭಟ್ಕಳ : ತಾಲೂಕಿನ ಬೈಲೂರಿನ ಕಾಸಗೇರಿಯಲ್ಲಿ ಅಯ್ಯಪ್ಪ ಮಾಲಾಧಾರಿಯೊಬ್ಬ ಕೆರೆಯ ನೀರಿನ ಹೊಂಡದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಈತನು ಕಳೆದ ಒಂದು ವಾರದ ಹಿಂದಷ್ಟೇ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ. ರಾತ್ರಿ ಬೈಲೂರು ಗ್ರಾಮದ ಕಾಸಗೇರಿ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಉಳಿಯುತ್ತಿದ್ದು, ಹಗಲಿನಲ್ಲಿ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ.

ಮೃತರನ್ನು ಅಭಿಷೇಕ ಗಣಪಯ್ಯ ನಾಯ್ಕ ಎಂದು ಗುರುತಿಸಲಾಗಿದ್ದು, ಬೈಲೂರು ಗ್ರಾಮದ ಕಾಸಗೇರಿಯಲ್ಲಿ ಲುಮಾ ಮಾನು ಮಾರಾಠಿ ಇವರಿಗೆ ಸಂಬಂಧ ಪಟ್ಟ ಅಡಿಕೆ ತೋಟದ ಮೇಲ್ಘಾದಾಲ್ಲಿರುವ ಕೆರೆ ಹೊಂಡದ ನೀರಿಗೆ ಸ್ನಾನಕ್ಕೆ ಎಂದು ಹೋದವನು ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿನ ಹೊಂಡದಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ.

RELATED ARTICLES  ಶ್ರೀಮದ್ ವಿದ್ಯಾಧೀಶ ತೀರ್ಥರ ಚಾತುರ್ಮಾಸ್ಯ ಜುಲೈ 20 ರಿಂದ

ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದ ಅವರು ಮುಳುಗಿ ಸಾವನ್ನಪ್ಪಿದ ಬಗ್ಗೆ ತಿಳಿದುಬಂದಿದೆ. ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಮನೆಯ ಮಗನನ್ನು ಕಳೆದುಕೊಂಡ ಕುಟುಂಬದವರ ಆಕೃಂದನ ಮುಗಿಲುಮುಟ್ಟಿದೆ.

RELATED ARTICLES  ಉತ್ತರಕನ್ನಡದಲ್ಲಿ 600 ಜನರಿಗೆ ಕೊರೋನಾ ಪಾಸಿಟಿವ್..!

ಈ ಸುದ್ದಿಗಳನ್ನೂ ಓದಿ.