ಶಿರಸಿ : ನಗರದ ಮಂಜವಳ್ಳಿಯ ದೇಶಭಂಡಾರಿ ಅವರಿಗೆ ಸೇರಿದ ಮನೆಯ ಕೀಲಿಯನ್ನು ಮೀಟಿ ನಗದು ದೋಚಿ ಕಳ್ಳ ಪರಾರಿಯಾಗಿದ್ದ ಮೊಸ್ಟ್ ಡೆಂಜರ್ಸ ನವೀನ ಚೌಹಾಣ ಶಿರಸಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಶಿರಸಿ ಸೇರಿದಂತೆ ಜಿಲ್ಲೆಯ ಹಲವು ಠಾಣೆಗಳಲ್ಲಿ ಮೊಸ್ಟ್ ವಾಂಟೆಡ್ ಆಗಿದ್ದ ಈತ, ಮತ್ತೆ ಈಗ ಪೋಲೀಸರ ಬಲೆಗೆ ಸಿಕ್ಕಿದ್ದಾನೆ. ಕಳ್ಳತನ ಮಾಡುವ ವೇಳೆಯಲ್ಲಿ ಯಾರಾದರೂ ಅಡ್ಡ ಬಂದರೇ ಮೆಣಸಿಪುಡಿ ಸೋಕಿ ಓಡಿಹೋಗುತ್ತಿದ್ದ ಎನ್ನಲಾಗಿದ್ದು, ಮಂಜವಳ್ಳಿ ಕಳ್ಳತನ ಪ್ರಕರಣದ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

RELATED ARTICLES  ಕುಮಟಾದಲ್ಲಿ ಡಯಾಲಿಸಿಸ್ ಘಟಕ ಪ್ರಾರಂಭ : ರೋಗಿಗಳ ಕುಶಲೋಪರಿ ವಿಚಾರಿಸಿದ ಶಾಸಕರು.

ಪ್ರಕರಣ ದಾಖಲಾಗಿ 6 ತಾಸಿನಲ್ಲಿ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದು, ಡಿ.ಎಸ್.ಪಿ.ರವಿ ನಾಯ್ಕ, ಸಿ.ಪಿ.ಐ.ರಾಮಚಂದ್ರ ನಾಯಕ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ಗ್ರಾಮೀಣ ಠಾಣೆಯ ತನಿಖಾ ಪಿ.ಎಸ್.ಐ. ಪ್ರತಾಪ್ ಪಚ್ಚಪ್ಪ ಗೊಳ್, ಪಿ.ಎಸ್.ಐ. ಈರಯ್ಯ ಹಾಗೂ ಸಿಬ್ಬಂದಿಗಳಿಂದ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ‌

RELATED ARTICLES  ಕುಮಟಾದ ವಿಲಾಶ್ ಮಾರ್ಬಲ್ಸ್ ಮಾಲಕ ಅಪಘಾತದಲ್ಲಿ ಸಾವು.