ಹೊನ್ನಾವರ: ಬ್ಯಾಂಕಿಗೆ ಹೋಗಿ ಬರುತ್ತೇನೆಂದು ತನ್ನ ಬೈಕಿನಲ್ಲಿ ತೆರಳಿದ ವಿವಾಹಿತ ಮನೆಗೆ ಬರದೆ, ಬ್ಯಾಂಕಿಗೂ ಹೋಗದೆ ಕಾಣೆಯಾದ ಘಟನೆ ಕುಂದಾಪುರದಲ್ಲಿ ನಡೆದಿದೆ. ಹೊನ್ನಾವರ ತಾಲೂಕಿನ ಯುವತಿಯನ್ನು ಮದುವೆಯಾಗಿದ್ದ ಕುಂದಾಪುರ ಮರವಂತೆ ಗ್ರಾಮದ ವಿಜಯ್‌ಕುಮಾರ್ ರಾವ್ ( 33 ವರ್ಷ ) ಎಸ್‌ಸಿಡಿಸಿಸಿ ಬ್ಯಾಂಕ್ ತಲ್ಲೂರು ಇದರ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದು, ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಟ್ಕಳದ ತೆರನಮಕ್ಕಿಯಲ್ಲಿ ಬೈಕಿನಲ್ಲಿ ಹೋಗುತ್ತಿರುವ ಕುರಿತು ಈ ಮೊದಲು ಮಾಹಿತಿ ಲಭ್ಯವಾಗಿದ್ದು, ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇವರ ಕುರಿತು ಮಾಹಿತಿ ಸಿಕ್ಕಲ್ಲಿ ನಿಮ್ಮ ಹತ್ತಿರದ ಪೊಲೀಸ್ ಠಾಣೆ ಅಥವಾ ಈ ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕುಟುಂಬಸ್ಥರು ಕೋರಿದ್ದಾರೆ. ಸಂಪರ್ಕಿಸಬೇಕಾದ ಸಂಖ್ಯೆ: 9482559996 ಅಥವಾ 9972438960.
Home Uttara Kannada ಬ್ಯಾಂಕಿಗೆ ಹೋಗಿ ಬರುತ್ತೇನೆಂದು ಬೈಕಿನಲ್ಲಿ ತೆರಳಿದ ವಿವಾಹಿತ ನಾಪತ್ತೆ: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ