ಕುಮಟಾ : ತಾಲೂಕಿನ ಸಂತೇಗುಳಿ ಗ್ರಾ.ಪಂ ವ್ಯಾಪ್ತಿಯ ಬಾಸೋಳ್ಳಿ ಕ್ರಾಸ್ ಸಮೀಪದಲ್ಲಿ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವ ಬಾಲಕಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ನಡೆದಿದೆ. ಈಕೆಯು ಸಂಬoಧಿಕರಾದ ಚಂದ್ರಕಾoತ ನಾಯ್ಕ ಹಾಗೂ ನಾಗಶ್ರೀ ಜತೆ ರಸ್ತೆ ಪಕ್ಕದಲ್ಲಿ ನಡೆದುಕೊಡು ಹೋಗುತ್ತಿರುವಾಗ ವೇಗವಾಗಿ ಬಂದ ಬೈಕ್ ಡಿಕ್ಕಿಹೊಡೆದಿದೆ.
ತಾಲೂಕಿನ ಬಾಸೋಳ್ಳಿಯ ಸೋಡಿಗದ್ದೆಯ ನಿವಾಸಿ ಲಾವಣ್ಯ ಪರಮೇಶ್ವರ ನಾಯ್ಕ(13) ಮೃತ ಬಾಲಕಿ ಎಂದು ತಿಳಿದುಬಂದಿದೆ.
ಬೈಕ್ ಸವಾರ ಚಾಲಕ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿ, ನಡೆದುಕೊಂಡು ಹೋಗುತ್ತಿರುವ ಮೂವರಿಗೆ ಡಿಕ್ಕಿಹೊಡೆದಿದ್ದಾನೆ. ಘಟನೆಯಲ್ಲಿ ಚಂದ್ರಕಾoತ ನಾಯ್ಕ ಹಾಗೂ ನಾಗಶ್ರೀ ನಾಯ್ಕ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಲಾವಣ್ಯ ನಾಯ್ಕ ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ.