ಶಿರಸಿ: ನಗರದ ಪದವಿ ಕಾಲೇಜಿನಲ್ಲಿ ಸಮಾಜಶಾಸ್ತ್ರವನ್ನು ಬೋದಿಸುತ್ತಿರುವ ಶಿಕ್ಷಕಿಯೋರ್ವರು ಹಿಂದೂ ಧರ್ಮದ ಪವಿತ್ರ ಗ್ರಂಥ ವಾದ ಭಗವದ್ಗೀತೆಯ ಬಗ್ಗೆ ಅದರಲ್ಲೂ ಶ್ರೀ ಕೃಷ್ಣನ ಬಗ್ಗೆ ಅವಹೇಳನ ಮಾಡಿದ್ದಾರೆ‌ ಎನ್ನಲಾಗುತ್ತಿದೆ.

ಶಿಕ್ಷಕಿ ಸೌಪರ್ಣಿಕ ಎನ್ನುವವರು ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ನಾನು ದನದ ಮಾಂಸ ತಿನ್ನುತ್ತಿದ್ದೇನೆ ಎಂದು ಹೇಳಿದ್ದಾನೆ ಎಂಬುದಾಗಿ ಬಿ.ಎ. ಎರಡನೆ ಕ್ಲಾಸಿನ ತರಗತಿಯಲ್ಲಿ ಈ ರೀತಿ ಹೇಳಿದ್ದಾರಂತೆ. ಇದನ್ನು ಅಲ್ಲಿಯ ವಿದ್ಯಾರ್ಥಿಗಳು ವಿರೋಧಿಸಿದಾಗ ಸಮರ್ಥನೆ ಬೇರೆ ಕೊಟ್ಟಿದ್ದಾರಂತೆ. ಇದು ಈಗ ನಗರದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು ದೊಡ್ಡ ವಿವಾದವಾಗುವ ಸಂಭವವಿದೆ.ಸತ್ಯಾಸತ್ಯತೆ ಮಕ್ಕಳಿಂದಲೇ ಬಹಿರಂಗವಾಗಬೇಕಾಗಿದೆ.

RELATED ARTICLES  ಶರಾವತಿ ನದಿ ತೀರದ ಜನರು ತಮ್ಮ ಜನ ಜಾನುವಾರು ಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ

ನಿಜವಾಗಲೂ ತರಗತಿಯಲ್ಲಿ ನಡೆದಿದ್ದೇನು? ಶಿಕ್ಷಕಿ ನಿಜವಾಗಿಯೂ ಈ ಹೇಳಿಕೆ ನೀಡಿದ್ದರಾ? ಈ ಎಲ್ಲ ಪ್ರಶ್ನೆಗೆ ಉತ್ತರ ತನಿಖೆಯ ನಂತರ ತಿಳಿಯಲಿದೆ. ಆದರೆ ಈ ಸುದ್ದಿ ನಗರದಲ್ಲಿ ಸಂಚಲನ ಮೂಡಿಸಿದ್ದು. ಹಿಂದು ಧರ್ಮ ಅವಹೇಳನದ ಬಗ್ಗೆ ಆಕ್ರೋಶಗೊಂಡಿದ್ದಾರೆ ಎನ್ನಲಾಗಿದೆ.

RELATED ARTICLES  ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದ ದೀಪಾ ಭಟ್ಟ