ಹೊನ್ನಾವರ : ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಳಿಬೈಲ್ ಹತ್ತಿರದ ಗಣಪು ಹೆಗಡೆ ಎನ್ನುವವರ ಮನೆಯ ಅಂಗಳಕ್ಕೆ ಶನಿವಾರ ಮುಂಜಾನೆ ಚಿರತೆಯೊಂದು ಬಂದಿರುವ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಮನೆಯಂಗಳದಲ್ಲಿದ್ದ ನಾಯಿಯನ್ನು ಬೇಟೆಯಾಡಲು ಬಂದಿದ್ದ ಚಿರತೆ, ನಾಯಿಯ ಮೇಲೆ ದಾಳಿ ಮಾಡಿರುವ ದೃಶ್ಯ
ಮನೆಯ ಸಿಸಿ ಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. ಶನಿವಾರ ಮುಂಜಾನೆ ಸುಮಾರು 4.20ರ ಸಮಯದಲ್ಲಿ ಈ ಘಟನೆ ನಡೆದಿದ್ದು, ನಾಯಿ ಒಂದೇ ಸಮನೆ ಕೂಗಿದ್ದದರಿಂದ ಮನೆಯವರು ಲೈಟ್ ಆನ್ ಮಾಡುತ್ತಿದ್ದಂತೆ ಸ್ಥಳದಿಂದ ಚಿರತೆ ಪರಾರಿಯಾಗಿದೆ ಎನ್ನಲಾಗಿದೆ.

RELATED ARTICLES  ಭಟ್ಕಳದಲ್ಲಿ ಹೆಲ್ತ್ ಎಮರ್ಜೆನ್ಸಿ ಇದ್ದರು ಅನವಶ್ಯಕವಾಗಿ ಓಡಾಟ ಮಾಡಿದ ವ್ಯಕ್ತಿ ಅರೆಸ್ಟ..!

ವಿಡಿಯೋ

ಇತ್ತೀಚಿನ ದಿನದಲ್ಲಿ ಹೊಸಾಕುಳಿ, ಸಾಸ್ಕೋಡ್ ಗ್ರಾಮದಲ್ಲಿ ಚಿರತೆ ಪದೇ ಪದೇ ಕಾಣಿಸಿಕೊಳ್ಳುವ ಮೂಲಕ ಆತಂಕ
ಮೂಡಿಸುತ್ತಿದೆ. ಈ ಹಿಂದೆ ಅರಣ್ಯ ಇಲಾಖೆಯವರು ಬೋನ್ ವ್ಯವಸ್ಥೆ ಕಲ್ಪಿಸಿದ್ದರು. ಬೋನ್ ಒಳಗೆ ಚಿರತೆ ಹೋಗದೆ
ತಪ್ಪಿಸಿಕೊಂಡಿತ್ತು. ಇದೀಗ ಮತ್ತೆ ಬೋನ್ ಅಳವಡಿಸಲಾಗಿದೆ ಎಂದು ವರದಿಯಾಗಿದೆ. ಈಗಲಾದರೂ ಚಿರತೆ ಸೆರೆಯಾಗತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

RELATED ARTICLES  ಹಳೆಯ ಪದ್ಧತಿಯಲ್ಲಿಯೇ ಪಡಿತರ ವಿತರಣೆ ಮಾಡುವುದು ಒಳ್ಳೆಯದು.